ADVERTISEMENT

‘ಮಣ್ಣಿನ ಆರೋಗ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’

ಜಲ ಸಂರಕ್ಷಣೆ ಸಮಗ್ರ ಕೃಷಿ ಕುರಿತು ವಿಜ್ಞಾನಿಗಳ ಜೊತೆ ಸಂವಾದ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 15:01 IST
Last Updated 10 ಮಾರ್ಚ್ 2024, 15:01 IST
ಚಲಗೇರಾ ಗ್ರಾಮದಲ್ಲಿ ಜಲಸಂರಕ್ಷಣೆ ಮತ್ತು ಸಮಗ್ರ ಕೃಷಿ ನೀತಿ ಕುರಿತು ರೈತ ಮತ್ತು ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ನಾಗಮ್ಮ ಸ್ವಾಮಿ ರೈತ ಮಹಿಳೆಯನ್ನು ಸನ್ಮಾನಿಸಲಾಯಿತು. ಶಾಂತವೀರ ಶಿವಾಚಾರ್ಯರು, ಡಾ.ರಾಜು ತೆಗ್ಗಳ್ಳಿ ಪಾಲ್ಗೊಂಡಿದ್ದರು
ಚಲಗೇರಾ ಗ್ರಾಮದಲ್ಲಿ ಜಲಸಂರಕ್ಷಣೆ ಮತ್ತು ಸಮಗ್ರ ಕೃಷಿ ನೀತಿ ಕುರಿತು ರೈತ ಮತ್ತು ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ನಾಗಮ್ಮ ಸ್ವಾಮಿ ರೈತ ಮಹಿಳೆಯನ್ನು ಸನ್ಮಾನಿಸಲಾಯಿತು. ಶಾಂತವೀರ ಶಿವಾಚಾರ್ಯರು, ಡಾ.ರಾಜು ತೆಗ್ಗಳ್ಳಿ ಪಾಲ್ಗೊಂಡಿದ್ದರು   

ಆಳಂದ: ‘ಭೂಮಿ ಮೇಲಿನ ಪ್ರತಿ ಜೀವಿಗೂ ಮಣ್ಣು ನೀರು ಗಾಳಿ ಅವಶ್ಯಕ. ಪ್ರತಿ ಜೀವಕೋಶಗಳಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳು ಬೇಕೆಬೇಕು. ಹೀಗಾಗಿ ಮಣ್ಣಿನ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜು ತೆಗ್ಗಳ್ಳಿ ಹೇಳಿದರು.

ತಾಲ್ಲೂಕಿನ ಚಲಗೇರಾ ಗ್ರಾಮದಲ್ಲಿ ಭಾನುವಾರ ಜಗದ್ಗುರು ರೇಣುಕಾಚಾರ್ಯ ಪ್ರಣವ ಕುಟೀರದ ಜಾತ್ರಾ ಮಹೋತ್ಸವ ಹಾಗೂ ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಮಾದನಹಿಪ್ಪರಗಿಯ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ, ಇವರ ಸಂಯುಕ್ತಾಶ್ರಯದಲ್ಲಿ ಜಲಸಂರಕ್ಷಣೆ ಮತ್ತು ಸಮಗ್ರ ಕೃಷಿ ನೀತಿ ಕುರಿತು ರೈತ ಮತ್ತು ಕೃಷಿ ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ಅತಿಯಾದ ರಸಾಯನಿಕ ಗೊಬ್ಬರ, ಅತೀ ನೀರು ಬಳಸುವದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತದೆ. ಮನುಷ್ಯರ ಹಾಗೆ ಮಣ್ಣಿಗೂ ಜೀವ ಇದೆ. ಮಳೆ ನೀರನ್ನು ಇಂಗಿಸುವದರಿಂದ ಅಂತರ್ಜಲ ಹೆಚ್ಚಳವಾಗುತ್ತದೆ. ಗಿಡ ಮರಗಳನ್ನು ಬೆಳೆಸುವದರಿಂದ ಮಳೆ ನೀರನ್ನು ಸಂರಕ್ಷಣ ಮಾಡುತ್ತದೆ. ಹಳ್ಳ ಕೆರೆಗಳಿಗೆ ಸಣ್ಣಪುಟ್ಟ ಕಟ್ಟೆ ಕಟ್ಟಿಸಿ ನೀರು ಇಂಗುವಂತೆ ಮಾಡಬೇಕು’ ಎಂದರು.

ADVERTISEMENT

ಬೇಸಾಯ ಶಾಸ್ತ್ರವಿಜ್ಞಾನಿ ಯುಸೂಫ್‌ ಅಲಿ ನಿಂಬರಗಿ, ಆಳಂದ ಪಶುವೈದ್ಯಾಧಿಕಾರಿ ಯಲ್ಲಪ್ಪ ಇಂಗಳೆ ಮಾತನಾಡಿದರು.

ಮಾದನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಸಹಾಯಕ ಅಧಿಕಾರಿ ಡಾ. ಹಣಮಂತ ಅಂಕದ ತೋಟಗಾರಿಕೆ ಬೆಳೆಗಳು ಅವುಗಳ ನಿರ್ವಹಣೆ ಮತ್ತು ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವುದು ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರಗತಿಪರ ರೈತ ಮಲ್ಲಿನಾಥ ನಿಂಬಾಳ ಮಾತನಾಡಿದರು.

ಪ್ರಣವ ಕುಟೀರದ ಪೀಠಾಧ್ಯಕ್ಷ ಶಾಂತವೀರ ಶಿವಾಚಾರ್ಯ ಸಾನ್ನಿಧ್ಯವಹಿಸಿದರು. ವೇದಿಕೆಯ ಮೇಲೆ ಮರಳುಸಿದ್ದ ಸ್ವಾಮೀಜಿ, ಪಂಚಾಕ್ಷರಿ ದೇವರು ಐನಾಪುರ, ರೈತರಾಧ ಮಲ್ಲಿಕಾರ್ಜುನ ಸಗುಮಳೆ, ರಾಜಕುಮಾರ ಪಾಟೀಲ, ಶಾಲಾ ಚಾರಿಟಬಲ್ ಟ್ರಸ್ಟ ಅಧ್ಯಕ್ಷ ಮಲ್ಲಿನಾಥ ಪರೇಣಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತ ಮಹಿಳೆ ನಾಗಮ್ಮ ಶಿವಯ್ಯ ಸ್ವಾಮಿ ಚಲಗೇರಾ, ಅಮೃತ ಕಾಶಪ್ಪ ಉಡಗಿ ಮಾ.ಹಿಪ್ಪರಗಿ, ರವಿಕುಮಾರ ನಂದೇಣಿ ನಿಂಬಾಳ ಸನ್ಮಾನಿಸಲಾಯಿತು. ಅಡವಯ್ಯ ಸ್ವಾಮಿ, ಪಂಚಯ್ಯ ಸ್ವಾಮಿ, ಗುಂಡೇರಾವ್ ದಿಂಡೂರೆ, ಹರಿದಾಸ ಹಜಾರೆ, ಮಹಾಂತೇಶ ಸಣಮನಿ, ಮಹಾನಂದ ನಂದಿಕೋಲ, ಶ್ರೀಶೈಲ ಮೇತ್ರೆ, ಶರಣಬಸಪ್ಪ ಕಣ್ಣಿ, ರಾಜು ಈಳಗೆ ಮುಂತಾವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.