ADVERTISEMENT

ದೇಶದ್ರೋಹಿಗಳನ್ನು ಗಲ್ಲಿಗೇರಿಸಿ: ಒತ್ತಾಯ

ರಾತೋರಾತ್ರಿ ಲೀಡರ್‌ ಆಗುವ ಹುಚ್ಚಿನಿಂದ ದೇಶಕ್ಕೆ ಅವಮಾನ ಮಾಡಿದ ಯುವತಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:16 IST
Last Updated 22 ಫೆಬ್ರುವರಿ 2020, 11:16 IST
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳ ಭಾವಚಿತ್ರದ ಪೋಸ್ಟರ್‌ಗಳನ್ನು ಕಲಬುರ್ಗಿಯಲ್ಲಿ ಶುಕ್ರವಾರ ದಹಿಸಲಾಯಿತು
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳ ಭಾವಚಿತ್ರದ ಪೋಸ್ಟರ್‌ಗಳನ್ನು ಕಲಬುರ್ಗಿಯಲ್ಲಿ ಶುಕ್ರವಾರ ದಹಿಸಲಾಯಿತು   

ಕಲಬುರ್ಗಿ: ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಕೂಗಿ ದೇಶದ್ರೋಹ ಎಸಗಿದವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿ ದೇಶಾಭಿಮಾನಿಗಳ ಬಳಗದ ಕಾರ್ಯಕರ್ತರು, ಇಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಘೋಷಣೆ ಹಾಕಿ ವಿಡಿಯೊ ಹರಿಬಿಟ್ಟ ಮೂವರು ವಿದ್ಯಾರ್ಥಿಗಳನ್ನು ಗಡಿಪಾರು ಮಾಡಬೇಕು.ಬೆಂಗಳೂರಿನಲ್ಲಿ ಆಯೋಜಿಸಿದ್ದ ಬಹಿರಂಗ ವೇದಿಕೆಯಲ್ಲಿ ಅಮೂಲ್ಯ ಲಿಯೋನ್‌ ಎಂಬಾಕೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾಳೆ. ಇಂಥವರ ಮೇಲೆ ಯಾವುದೇ ಕಾರಣಕ್ಕೂ ಕನಿಕರ ತೋರಿಸಬಾರದು. ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದೂ ಒತ್ತಾಯಿಸಿದರು.‌

ಅಮೂಲ್ಯ ಹಾಗೂ ಕಾಶ್ಮೀರಿ ಮೂಲದ ವಿದ್ಯಾರ್ಥಿಗಳ ಭಾವಚಿತ್ರವಿದ್ದ ಪೋಸ್ಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.ವೀರಶೈವ ಮಹಾಸಭಾ ಯುವ ಘಟಕ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಸಂಘಟನೆಯಶರಬಸಪ್ಪ ಅಂಬೆಸಿಂಗೆ, ರವೀಂದ್ರ ಮುತ್ತಿನ, ಮಲ್ಲಣ್ಣ ಕುಲಕರ್ಣಿ ಕೋಳಕೂರ, ಅಶೋಕ ಪಾಟೀಲ ಗೌನಳ್ಳಿ, ಶರಣು ಸಜ್ಜನ, ಡಾ.ಶಂಬು ಬಳಬಟ್ಟಿ, ಶಿವಯ್ಯ ಸ್ವಾಮಿ, ಮಂಜು ಕಾಳೆ, ಅಶ್ವಿನಕುಮಾರ ಡಿ., ಶಿವರಾಜ ಸಂಗೋಳಿ, ಶಿದ್ದರಾಜ ಬಿರಾದಾರ, ಗಿರಿಶಗೌಡ ಇನಾಮ್ದಾರ, ಮನೀಶ ಪಾಂಡೆ ಇದ್ದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ:

ದೇಶದ್ರೋಹದ ಘೋಷಣೆ ಕೂಗಿದ ಅಮೂಲ್ಯ ಲಿಯೋನ್‌ ಸೇರಿದಂತೆ ಆ ಕಾರ್ಯಕ್ರಮ ಆಯೋಜಿಸಿದ ಎಲ್ಲರನ್ನೂ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ದೇಶದ್ರೋಹಿಗಳನ್ನು ಗಡಿಪಾರು ಮಾಡಿ’ ಎಂದುಜಿಲ್ಲಾಧಿಕಾರಿ ಕಚೇರಿ ಮುಂದೆ ಘೋಷಣೆ ಕೂಗಿದ ಕಾರ್ಯಕರ್ತರು, ಉದ್ದೇಶಪೂರ್ವಕವಾಗಿ ಅಮೂಲ್ಯಳನ್ನು ಕರೆಯಿಸಿ ಮೈಕ್‌ ನೀಡಿ ಮಾತನಾಡಲು ಹೇಳಿದ್ದಾರೆ. ಅವರೆಲ್ಲರ ಮೇಲೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದೂ ಆಗ್ರಹಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಎಂ. ಕಮ್ಮಾರ, ಗೌರವಾಧ್ಯಕ್ಷ ಸಂಪತ್‌ ಜೆ. ಹಿರೇಮಠ, ಕಲ್ಯಾಣ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ನಗರ ಘಟಕದ ಅಧ್ಯಕ್ಷ ಶಂಭು ಶಹಾಬಾದಕರ, ಸಂತೋಷ ಚೌಧರಿ, ನಿಜಲಿಂಗ ಅಗ್ಗಿಮಠ, ವಿಜಯಕುಮಾರ ಅಂಕಲಗಿ, ಅಂಬರೀಶ ಶಹಾಬಾದಕರ, ಅಣ್ಣಾರಾಯ ಮೂಲಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.