ADVERTISEMENT

ಆಳಂದ: ಅನುದಾನ ದುರ್ಬಳಕೆ ಆರೋಪ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 5:51 IST
Last Updated 8 ಏಪ್ರಿಲ್ 2022, 5:51 IST
ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾ.ಪಂ ಕಚೇರಿ ಮುಂದೆ ದಲಿತ ಸೇನೆಯಿಂದ ಪ್ರತಿಭಟನೆ ಜರುಗಿತು. ಧರ್ಮಾ ಬಂಗರಗಾ, ಮಲ್ಲಿಕಾರ್ಜುನ ಬೋಳಣಿ ಇದ್ದರು
ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾ.ಪಂ ಕಚೇರಿ ಮುಂದೆ ದಲಿತ ಸೇನೆಯಿಂದ ಪ್ರತಿಭಟನೆ ಜರುಗಿತು. ಧರ್ಮಾ ಬಂಗರಗಾ, ಮಲ್ಲಿಕಾರ್ಜುನ ಬೋಳಣಿ ಇದ್ದರು   

ಆಳಂದ:ತಾಲ್ಲೂಕಿನ ನಿಂಬರ್ಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಅನುದಾನ ದುರಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸೇನೆ ಗ್ರಾಮ ಘಟಕದಿಂದ ಬುಧವಾರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಡಾ.ಅಂಬೇಡ್ಕರ್ ಚೌಕ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಗ್ರಾ.ಪಂ ಅಧ್ಯಕ್ಷ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿ ಘೋಷಣೆ ಕೂಗಲಾಯಿತು.

ಪ್ರತಿಭಟನೆ ಉದ್ದೇಶಿಸಿ ದಲಿತ ಸೇನೆ ತಾಲ್ಲೂಕಾಧ್ಯಕ್ಷ ಧರ್ಮಾ ಬಂಗರಗಾ ಮಾತನಾಡಿ, 14ನೇ ಮತ್ತು 15ನೇ ಹಣಕಾಸು ಯೋಜನೆಯಲ್ಲಿ ವಿವಿಧ ಕಾಮಗಾರಿ ಕೈಗೊಳ್ಳದೆ ನಕಲಿ ದಾಖಲೆ ಸೃಷ್ಟಿಸಿ ಅನುದಾನ ಎತ್ತಿ ಹಾಕಲಾಗಿದೆ. ಜಿ.ಪಂ ಸಿಇಒ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಲ್ಲಿಕಾರ್ಜುನ ಬೋಳಣಿ ಮಾತನಾಡಿದರು.

ಮಹೇಶ ಕೊಚ್ಚಿ, ವಸಂತ ಕುಮಸಿ, ಶಿವಲಿಂಗಪ್ಪ ಚಲಗೇರಾ, ಮಂಜುನಾಥ ಬಂಡಾರಿ, ದಿಲೀಪ ಮಟಕಿ, ಶಂಕರ ಬನಪಟ್ಟಿ, ಅಸ್ಪಾಕ್ ಲದಾಫ್, ಅಮೃತ ಯಳಸಂಗಿ, ಶಿವಲಿಂಗ ಮಾಡಿಯಾಳಕರ, ಚಂದ್ರಶಾ ಗಾಯಕವಾಡ, ಶ್ರೀಕಾಂತ ರೆಡ್ಡಿ, ಚಂದ್ರಕಾಂತ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.