ADVERTISEMENT

ಅಂಬೇಡ್ಕರ್‌ ಮನೆ ಮೇಲೆ ಕಲ್ಲುತೂರಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:17 IST
Last Updated 10 ಜುಲೈ 2020, 14:17 IST
ದಲಿತ ಸೇನೆ ಕಾರ್ಯಕರ್ತರು ಡಾ.ಅಂಬೇಡ್ಕರ್ ನಿವಾಸದ ಮೇಲಿನ ಕಲ್ಲುತೂರಾಟ ಖಂಡಿಸಿ ಆಳಂದ ತಹಶೀಲ್ದಾರ್‌ ಮೂಲಕ ಮನವಿ ಪತ್ರ ಸಲ್ಲಿಸಿದರು
ದಲಿತ ಸೇನೆ ಕಾರ್ಯಕರ್ತರು ಡಾ.ಅಂಬೇಡ್ಕರ್ ನಿವಾಸದ ಮೇಲಿನ ಕಲ್ಲುತೂರಾಟ ಖಂಡಿಸಿ ಆಳಂದ ತಹಶೀಲ್ದಾರ್‌ ಮೂಲಕ ಮನವಿ ಪತ್ರ ಸಲ್ಲಿಸಿದರು   

ಆಳಂದ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸೇರಿದ ಮಹಾರಾಷ್ಟ್ರದ ದಾದರ್‌ ನಿವಾಸ ರಾಜಗೃಹದ ಮೇಲೆ ನಡೆದ ಕಲ್ಲುತೂರಾಟದ ಘಟನೆ ಖಂಡಿಸಿ, ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಲು ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ತಾಲ್ಲೂಕು ಅಧ್ಯಕ್ಷ ಧರ್ಮಾ ಬಂಗರಗಾ ಮಾತನಾಡಿ, ಕಲ್ಲು ತೂರಾಟದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಹಾಗೂ ರಾಜಗೃಹಕ್ಕೆ ನಿರಂತರ ಪೊಲೀಸ್‌ ಬಂದೋಬಸ್ತ್‌ ಒದಗಿಸುವಂತೆ ಆಗ್ರಹಿಸಿದರು.

ಮುಖಂಡರಾದ ಶರಣಬಸಪ್ಪ ಕವಲಗಾ, ಚಂದ್ರಶಾ ಗಾಯಕವಾಡ, ಲಕ್ಷ್ಮಣ ನಿಂಬಾಳ, ಆಕಾಶ ವಾಘಮೋರೆ, ಮಂಜುನಾಥ ಸಿಂಗೆ, ಮಹೇಂದ್ರ ಸಿಂಗೆ, ದತ್ತಾತ್ರೇಯ ಕಟ್ಟಿಮನಿ, ಸಂತೋಷ ಪಟ್ಟೇದ, ಶಶಿ ವಿಭೂತೆ, ಲಕ್ಷ್ಮಣ ತಳಕೇರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.