ADVERTISEMENT

ಸೆಕ್ಷನ್ 144 ಹಿಂಪಡೆಯಲು ಆಗ್ರಹಿಸಿ ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 7:41 IST
Last Updated 13 ಡಿಸೆಂಬರ್ 2019, 7:41 IST
   

ಕಲಬುರ್ಗಿ: ಪೌರತ್ವ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಹಿನ್ನೆಲೆಯಲ್ಲಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದ್ದನ್ನು ಹಿಂದಕ್ಕೆ ಪಡೆಯುವಂತೆ ಮತ್ತು‌ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ‌ನಡೆಸಿದರು.

ನಿಷೇಧಾಜ್ಞೆ ಜಾರಿಗೊಳಿಸಿ ಕಮಿಷನರ್ ಎಂ.ಎನ್. ನಾಗರಾಜ ಆದೇಶ ಹೊರಡಿಸಿದ್ದಾರೆ.

ಮುಖಂಡರಾದ ಮಾರುತಿ ಮಾನ್ಪಡೆ, ಮಹ್ಮದ್ ಅಸಗರ ಚುಲ್ ಬುಲ್, ಉಸ್ತಾದ್ ನಾಸೀರ ಹುಸೇನ್, ವಾಹಜ್ ಬಾಬಾ, ಯು ಬಸವರಾಜು ಇನ್ನಿತರರು ಆಯುಕ್ತಾಲಯದ ಮೆಟ್ಟಿಲು ಮೇಲೆ‌ ಕುಳಿತುಕೊಂಡು ಆದೇಶ ಹಿಂಪಡೆಯಲುಆಗ್ರಹಿಸಿದರು.

ADVERTISEMENT

ಪೊಲೀಸರು ತಡೆಯಲು ಯತ್ನಿಸಿದರೂ ಘೋಷಣೆ ಕೂಗಲು ಆರಂಭಿಸಿದರು. ಪ್ರತಿಭಟನೆಗೆ ಮಣಿದ ನಾಗರಾಜ, ಡಿಸಿಪಿ ಕಿಶೋರ್ ಬಾಬು ಇತರರು ಪ್ರತಿಭಟನಾನಿರತರಜತೆ ಮಾತಕತೆ ನಡೆಸಿದರು.

144 ಸೆಕ್ಷನ್ ಹಿಂದಕ್ಕೆ ಪಡೆಯುವವರೆಗೂ ನಿಮ್ಮೊಂದಿಗೆ ಮಾತನಾಡಲ್ಲ ಎಂದು ಮಾನ್ಪಡೆ ಇತರರು ಪಟ್ಟು ಹಿಡಿದರು. ಅಧಿಕಾರಿಗಳು ಸಮಾಧಾನ ಮಾಡಿ ಕಚೇರಿಯೊಳಗೆ ಕರೆದುಕೊಂಡು ಹೋದರು. ಸಮಾರು ಹೊತ್ತು ಮಾತುಕತೆ ನಡೆಸಿದರು. ಪೊಲೀಸರು ನಿಷೇಧಾಜ್ಞೆ ವಿಧಿಸಲು ಕಾರಣ ತಿಳಿಸಿದರು.

ಮಾತುಕತೆ ವೇಳೆಯಲ್ಲಿ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಇಲಿಯಾಸ್ ಬಾಗವಾನ, ಮಾಜಿ‌ ಮೇಯರ್ ಸೈಯದ್ ಅಹ್ಮದ್ ಇದ್ದರು.

ಪೌರತ್ವ ತಿದ್ದುಪಡಿ ‌ಮಸೂದೆ ವಿರೋಧಿಸಿ ದೇಶದ ಅನೇಕ ಕಡೆ ಗುರುವಾರ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.