ADVERTISEMENT

26ರಿಂದ ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 4:47 IST
Last Updated 17 ಜುಲೈ 2021, 4:47 IST
ಚಂದ್ರಕಾಂತ ಕೆ.ನಾಟೀಕಾರ
ಚಂದ್ರಕಾಂತ ಕೆ.ನಾಟೀಕಾರ   

ಕಲಬುರ್ಗಿ: ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಮನೆ ಮುಂದೆ ಧರಣಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಲಬುರ್ಗಿ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ.ನಾಟೀಕಾರ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಗಳಲ್ಲಿ ಜನಸಂಖ್ಯೆ ಆಧರಿಸಿ ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದರೂ ಸರ್ಕಾರ ಇಲ್ಲಿಯವರೆಗೆ ವರದಿಯನ್ನು ಅನುಷ್ಠಾನಗೊಳಿಸಿಲ್ಲ. ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಜುಲೈ 26ರಿಂದ ಆಗಸ್ಟ್ 30ರವರೆಗೆ ಬೆಳಿಗ್ಗೆ 11.30ಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಎದುರು ಸಮಾಜದ ಮುಖಂಡರು ಧರಣಿ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಜುಲೈ 26ರಂದು ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ, ಜುಲೈ 30ರಂದು ಶಾಸಕ ಬಸವರಾಜ ಮತ್ತಿಮೂಡ, ಆಗಸ್ಟ್ 3ರಂದು ಶಾಸಕಿ ಕನ್ನೀಜ್ ಫಾತೀಮಾ, 6ರಂದು ಶಾಸಕ ಅಜಯಸಿಂಗ್, 9ರಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, 12ರಂದು ಶಾಸಕ ಅವಿನಾಶ ಜಾಧವ, 15ರಂದು ಶಾಸಕ ಪ್ರಿಯಾಂಕ್ ಖರ್ಗೆ, 18ರಂದು ಶಾಸಕ ಸುಭಾಷ್ ಗುತ್ತೇದಾರ, 21ರಂದು ಶಾಸಕ ಎಂ.ವೈ.ಪಾಟೀಲ, 24ರಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, 27ರಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹಾಗೂ ಆಗಸ್ಟ್ 30ರಂದು ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಮುಖಂಡರಾದ ಜೈರಾಜ ಕಿಣಗಿಕರ, ನಾಗರಾಜ ಮುದ್ನಾಳ, ಸಿದ್ದಲಿಂಗ ಕಟ್ಟಿಮನಿ, ನಂದಕಿಶೋರ ಕಾಂಬಳೆ, ಕಂಠೆಪ್ಪ ಹರವಾಳ, ಧರ್ಮಣ್ಣ ಎನ್.ನಾಟೀಕಾರ, ಮಹಾದೇವ ಅಲಗೂರ, ರುಕ್ಕಪ್ಪ ಕಾಂಬಳೆ, ಅಶೋಕ ಜಗದಾಳೆ, ಮಾನಪ್ಪ ಹಂಗರಗಾ, ರೇವಣಸಿದ್ದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.