ADVERTISEMENT

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಶಿವಶರಣಪ್ಪ ಮುಳೇಗಾಂವ

ಕನ್ನಡ ಉಪನ್ಯಾಸರಿಗೆ ಡಿಡಿಪಿಯು ಶಿವಶರಣಪ್ಪ ಮೂಳೇಗಾಂವ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 6:15 IST
Last Updated 5 ಏಪ್ರಿಲ್ 2024, 6:15 IST
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಸುದ್ದೀನ್ ತುಮಕೂರಕರ್, ಜಗದೀಶ್ ಬಿಜಾಪುರೆ, ವೈಜನಾಥ್ ಕಾಳೆ ಅವರನ್ನು ಸನ್ಮಾನಿಸಲಾಯಿತು. ಡಿಡಿಪಿಯು ಶಿವಶರಣಪ್ಪ ಮುಳೇಗಾಂವ ಪಾಲ್ಗೊಂಡಿದ್ದರು
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌಸುದ್ದೀನ್ ತುಮಕೂರಕರ್, ಜಗದೀಶ್ ಬಿಜಾಪುರೆ, ವೈಜನಾಥ್ ಕಾಳೆ ಅವರನ್ನು ಸನ್ಮಾನಿಸಲಾಯಿತು. ಡಿಡಿಪಿಯು ಶಿವಶರಣಪ್ಪ ಮುಳೇಗಾಂವ ಪಾಲ್ಗೊಂಡಿದ್ದರು   

ಕಲಬುರಗಿ: ‘ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮುಳೇಗಾಂವ ಅಭಿಪ್ರಾಯಪಟ್ಟರು.

ನಗರದ ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ಕನ್ನಡ ಮೌಲ್ಯಮಾಪನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉಪನ್ಯಾಸಕರು ಕ್ರಿಯಾಶೀರಾಗಿರಬೇಕು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಹೊಸದನ್ನು ಕಲಿತು, ಹೊಸದನ್ನು ಕಲಿಸಬೇಕು. ಕನ್ನಡ ಭಾಷೆಯನ್ನು ಪ್ರೀತಿಸಿ, ಅದನ್ನು ಬೆಳೆಸಿ ಉಳಿಸಬೇಕು. ಇದು ಕನ್ನಡಿಗರ ಜವಾಬ್ದಾರಿ’ ಎಂದರು.

ADVERTISEMENT

ಮೌಲ್ಯಮಾಪನ ಕೇಂದ್ರದ ಮುಖ್ಯ ಪರೀಕ್ಷಕ ಚಂದ್ರಕಾಂತ ಬಿರಾದಾರ, ಮೌಲ್ಯಮಾಪನ ಕೇಂದ್ರದ ವೀಕ್ಷಕ ಅರುಣಕುಮಾರ ಪಾಟೀಲ ಮಾತನಾಡಿದರು. ಎಸ್‌ಬಿಆರ್ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಹೊಗಾಡೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಿಯು ಕಾಲೇಜಿನ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಸೇವಾ ನಿವೃತ್ತಿಗೊಳ್ಳುತ್ತಿರುವ ಉಪನ್ಯಾಸಕರು ಹಾಗೂ ಪ್ರಾಚಾರ್ಯರಾದ ಗೌಸುದ್ದೀನ್ ತುಮಕೂರಕರ್, ಜಗದೀಶ್ ಬಿಜಾಪುರೆ, ವೈಜನಾಥ ಕಾಳೆ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಿರಗುಡಿ ಅವರನ್ನು ಗೌರವಿಸಲಾಯಿತು. ವಿಜಯಕುಮಾರ್ ರೋಣದ ನಿರೂಪಿಸಿದರು. ಮನ್ಮಥ ವಂದಿಸಿದರು.

ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಉಪನ್ಯಾಸಕರು, ಪ್ರಾಚಾರ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.