ಚಿಂಚೋಳಿ: ತಾಲ್ಲೂಕಿನಲ್ಲಿ ನಾಯಿ ಕಡಿತದಿಂದ ಜಾನುವಾರುಗಳ ಸಾವಿನ ಸಂಖ್ಯೆ ಎರಡಕ್ಕೇರಿದೆ. ತಾಲ್ಲೂಕಿನ ಪಾಲ್ತಾಂಯ ತಾಂಡಾದಲ್ಲಿ ಒಂದು ಹಸು ಸಾವಿಗಿಡಾಗಿದೆ.
ಗ್ರಾಮದಲ್ಲಿ ಇನ್ನೊಂದು ಹೋರಿಯಲ್ಲಿ ರೇಬಿಸ್ ಲಕ್ಷಣ ಗೋಚರಿಸಿದ್ದು, ಅದಕ್ಕೆ ಮರಕ್ಕೆ ಕಟ್ಟಿಹಾಕಿ ಪ್ರತ್ಯೇಕವಾಗಿರಿಸಲಾಗಿದೆ.
ಅದೃಷ್ಟವಶಾತ ಬೇರೆ ಜಾನುವಾರುಗಳು ಇವುಗಳ ಸಂಪರ್ಕಕ್ಕೆ ಬಂದಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಜಾನುವಾರುಗಳಿಗೆ ಹುಚ್ಚು ನಾಯಿ ಅಥವಾ ಆರೋಗ್ಯವಂತ ನಾಯಿ ಕಡಿದರೂ ಕಡ್ಡಾಯವಾಗಿ ರೇಬಿಸ್ ನಿರೋಧಕ ಲಸಿಕೆ ಹಾಕಿಸಬೇಕಾಗುತ್ತದೆ’ ಎಂದು ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ಮಲ್ಲಿಕಾರ್ಜುನ ಗುತ್ತೇದಾರ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪಾಲ್ತಾಂಯ ತಾಂಡಾದಲ್ಲಿ ಕಳೆದ ವಾರ ನಾಯಿ ಕಡಿತದಿಂದ ಹಸುವಿನಲ್ಲಿ ರೇಬೀಸ್ ಕಂಡು ಬಂದಿತ್ತು. ಸೊಂಕಿತ ಹಸು ತಾಂಡದಲ್ಲಿ ಓಡಾಡಿದ್ದರಿಂದ ಆತಂಕ ಉಂಟು ಮಾಡಿದೆ. ಮುಂಜಾಗೃತವಾಗಿ ಸಾವಿಗಿಡಾದ ಹಸುವಿನ ಸಂಪರ್ಕಕ್ಕೆ ಬಂದ ಇತರ ಜನಿವಾರುಗಳಿಗೆ ಮೂರು ಡೋಸ್ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ ಎಂದು ಸಲಗರ ಬಸಂತಪುರ ಗ್ರಾಮೀಣ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತೃಪ್ತಿ ಕಟ್ಟಿಮನಿ ಅವರು ತಿಳಿಸಿದ್ದಾರೆ.
ರೋಗ ಹರಡುವಿಕೆ ಹಾಗೂ ರೋಗದ ಲಕ್ಷಣಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ನಾಗರೆಡ್ಡಿ ಹಾಸರೆಡ್ಡಿ ದೇಸಾಯಿ, ಶಾಮರಾವ್ ಜಾಧವ, ಯಲ್ಲಾಲಿಂಗ ಪೂಜಾರಿ, ರವಿ ಚಿಂಚೋಳಿ, ರುದ್ರಮುನಿ ಮಾಳಗಿ, ಶಿವರಾಮ ಜಾಧವ, ಡಾ. ಸಾಯಿಕಿರಣ, ಪಶು ವೈದ್ಯಕೀಯ ಪರೀಕ್ಷಕ ರಹೀಮಸಾಬ್, ಬಕ್ಕಪ್ಪ ಮೊದಲಾದವರು ಇದ್ದರು.
ಜಾನುವಾರುಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ. ರೋಗದ ಲಕ್ಷಣ ಹರಡುವಿಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ.ಡಾ.ಮಲ್ಲಿಕಾರ್ಜುನ ಗುತ್ತೇದಾರ ಸಹಾಯಕ ನಿರ್ದೆಶಕರು ಪಶು ಆಸ್ಪತ್ರೆ ಪಶು ಪಾಲನಾ ಇಲಾಖೆ ಚಿಂಚೋಳಿ
ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಗ್ರಾ.ಪಂ. ತುರ್ತು ಕ್ರಮ ಕೈಗೊಳ್ಳಬೇಕುರಾಜು ಜಾಧವ ರುಸ್ತಂಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.