ADVERTISEMENT

ಚಿತ್ತಾಪುರ | ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 15:14 IST
Last Updated 22 ಆಗಸ್ಟ್ 2024, 15:14 IST
ಚಿತ್ತಾಪುರ ಪಟ್ಟಣದ ಬ್ರಾಹ್ಮಣ ಸಮಾಜದ ಬಡಾವಣೆಯಲ್ಲಿ ಬುಧವಾರ ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಮಹೋತ್ಸವ ನಿಮಿತ್ತ ರಥೋತ್ಸವ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ಜರುಗಿತು
ಚಿತ್ತಾಪುರ ಪಟ್ಟಣದ ಬ್ರಾಹ್ಮಣ ಸಮಾಜದ ಬಡಾವಣೆಯಲ್ಲಿ ಬುಧವಾರ ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಮಹೋತ್ಸವ ನಿಮಿತ್ತ ರಥೋತ್ಸವ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ಜರುಗಿತು   

ಚಿತ್ತಾಪುರ: ಪಟ್ಟಣದಲ್ಲಿನ ಬ್ರಾಹ್ಮಣ ಸಮಾಜದ ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಬೃಂದಾವನ ಉತ್ತರಾದಿ ಮಠದಲ್ಲಿ ಬುಧವಾರ ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಮಹೋತ್ಸವ, ರಥೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿ, ಸಂಭ್ರಮದಿಂದ ನಡೆಯಿತು.

ಬೃಂದಾವನಕ್ಕೆ ಫಲಪುಷ್ಪಗಳಿಂದ ಅರ್ಚಕರಾದ ಗುರುರಾಜ, ಉತ್ತಮ ಪುರೋಹಿತ ಹಾಗೂ ಪವನಕುಮಾರ ಅವರಿಂದ ಅಲಂಕಾರ ಮಾಡಲಾಯಿತು. ಬೆಳಗ್ಗೆ ಅಷ್ಟೋತ್ತರ ಪಾರಾಯಣ ಜರುಗಿತು. ಪಂಡಿತ ತಿರುಪತಿ ಆಚಾರ್ ಅವರಿಂದ ರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಕಾರ್ಯಕ್ರಮ ನೆರವೇರಿತು. ವೆಂಕಣ್ಣಾಚಾರ್ಯರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ಪಟ್ಟಣದ ಸಮಸ್ತ ವಿಪ್ರರು ಮತ್ತು ಮಹಿಳೆಯರಿಂದ ರಥೋತ್ಸವ ಹಾಗೂ ಗಜವಾಹನೋತ್ಸವ ಆಚರಿಸಲಾಯಿತು.

ಸಂಜೆ ದಾಸವಾಣಿ ಕಾರ್ಯಕ್ರಮ ಜರುಗಿತು. ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆಯ ನಂತರ ಆರಾಧನಾ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ನರಸಿಂಗರಾವ್ ದೇಶಪಾಂಡೆ , ಸುಧಾಕರ ಕುಲಕರ್ಣಿ, ಸಂಜೀವ ಕೊಡದೂರ, ವೆಂಕಟೇಶ ಭರತಕುಮಾರ, ಅನಂತ್ ಹೆಡಿಗಿಮುದ್ರ ಅವರಿಂದ ಅನ್ನ ಸಂತರ್ಪಣೆ ನೆರವೇರಿತು. ರವಿ ಕುಲಕರ್ಣಿ, ವಿಶ್ವನಾಥ ಅಫಜಲಪುರಕರ, ರಾಮಾಚಾರಿ ಧನರಾಜ, ನರಹರಿ ಕುಲಕರ್ಣಿ, ಪವನಕುಮಾರ, ರಾಜೇಶ್ ದೇಶಪಾಂಡೆ, ಅಂಬರೀಶ ಕುಲಕರ್ಣಿ, ನಾಗರಾಜ ಅಲ್ಲೂರು, ರಾಜು ಕೊಡದೂರು, ಜಯಂತ್ ಮಾಲಗತ್ತಿ, ಗಿರೀಶ್ ಜಾನಿಬ್ ಹಾಗೂ ಮಹಿಳಾ ಭಜನಾ ಮಂಡಳಿಯ ಪದಾಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.