ADVERTISEMENT

ಕಲಬುರ್ಗಿ ನಗರಕ್ಕೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 11:13 IST
Last Updated 9 ಏಪ್ರಿಲ್ 2021, 11:13 IST
ಕಲಬುರ್ಗಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆ ಸುರಿಯಿತು
ಕಲಬುರ್ಗಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆ ಸುರಿಯಿತು   

ಕಲಬುರ್ಗಿ: ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ತುಂತುರು ಮಳೆ ಸುರಿಯಿತು.

ಬೆಳಿಗ್ಗೆ 10ರಿಂದಲೇ ಬಿಸಿಲಿನ ತಾಪ ಹೆಚ್ಚಾಗಿತ್ತು. ಆದರೆ, ಮಧ್ಯಾಹ್ನ 2ರ ಸುಮಾರಿಗೆ ಮೋಡ ಕವಿದು, 3 ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿತು. ಇಲ್ಲಿನ ಶಕ್ತಿನಗರ, ಶಾಸ್ತ್ರೀನಗರ, ಮಹಾವೀರ ನಗರ, ವೆಂಕಟೇಶ್ವರ ನಗರ, ಜಿಲ್ಲಾಧಿಕಾರಿ ಕಚೇರಿ, ಗುಲಬರ್ಗಾ ವಿಶ್ವವಿದ್ಯಾಲಯ‍ ಪ್ರದೇಶ, ಹೈಕೋರ್ಟ್‌ ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಅಲ್ಲಲ್ಲಿ ತುಂತುರು ಉದುರಿತು.

ಕಳೆದ ಒಂದು ವಾರದಿಂದ ನಗರದ ಗರಿಷ್ಠ ಉಷ್ಣಾಂಶ 40ರಿಂದ 42 ಡಿಗ್ರಿ ದಾಟಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ಶುಕ್ರವಾರ ಸುರಿದ ಮಳೆ ತುಸು ತಂಪೆರೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.