ADVERTISEMENT

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಮಳೆ; ಧುಮ್ಮಿಕ್ಕಿದ ಜಲಪಾತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 14:24 IST
Last Updated 8 ಸೆಪ್ಟೆಂಬರ್ 2020, 14:24 IST
ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಬಳಿ ಮಂಗಳವಾರ ಸುರಿದ ಮಳೆಗೆ ಧುಮ್ಮಿಕ್ಕಿ ಹರಿದ ನೆಲಗಂಗಿ ಜಲಪಾತಚಿತ್ರ: ಜಗನ್ನಾಥ ಶೇರಿಕಾರ
ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಬಳಿ ಮಂಗಳವಾರ ಸುರಿದ ಮಳೆಗೆ ಧುಮ್ಮಿಕ್ಕಿ ಹರಿದ ನೆಲಗಂಗಿ ಜಲಪಾತಚಿತ್ರ: ಜಗನ್ನಾಥ ಶೇರಿಕಾರ   

ಕಲಬುರ್ಗಿ: ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಕಾಳಗಿ, ಯಡ್ರಾಮಿಯಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯಿತು. ಕೆಲ ದಿನಗಳಿಂದ ಬಿಡುವುಕೊಟ್ಟಿದ್ದ ಮಳೆ ಮತ್ತೆ ಶುರುವಾಗಿದ್ದರಿಂದ ಜಿಲ್ಲೆಯಾದ್ಯಂತ ಕೆರೆ ಕಟ್ಟೆಗಳು ಭರ್ತಿಯಾಗಿವೆ.

ಚಿಂಚೋಳಿ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಬಳಿಯ ನೆಲಗಂಗಿ ಜಲಪಾತ ಉಕ್ಕಿ ಹರಿಯುತ್ತಿದೆ.

ಕಲಬುರ್ಗಿ ನಗರದಲ್ಲಿ ಮಧ್ಯಾಹ್ನ ಅರ್ಧತಾಸು ಬಂದ ಮಳೆ ಕೊಂಚ ಬಿಡುವು ಕೊಟ್ಟು ಸಂಜೆಯೂ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಧಾರಾಕಾರವಾಗಿ ಸುರಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.