ADVERTISEMENT

ಕಲಬುರಗಿಯಲ್ಲಿ ಗಾಳಿ, ಗುಡುಗು, ಸಿಡಿಲಿನ ಆರ್ಭಟ: ಇಳೆ ತಂಪಾಗಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 8:27 IST
Last Updated 20 ಏಪ್ರಿಲ್ 2024, 8:27 IST
   

ಕಲಬುರಗಿ: ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನರಿಗೆ ಶನಿವಾರ ಮಧ್ಯಾಹ್ನ ಸುರಿದ ಮಳೆ ತಂಪಿನ ಕಂಪು ನೀಡಿತು. ದ್ವಿಚಕ್ರ ವಾಹನಗಳ ಸವಾರರು, ಪಾದಚಾರಿಗಳು ಮಳೆಯಲ್ಲಿ ನೆನೆದು ಮಳೆಯ ಪುಳಕ ಅನುಭವಿಸಿದರು.

ಬಿರುಸಿನ ಮಳೆಯಿಂದಾಗಿ ಬಿಸಿಲಿನಿಂದ ಕಾದಿದ್ದ ರಸ್ತೆಗಳ ಮೇಲೆ ನೀರು ಹರಿಯಿತು.

ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಜೊತೆಗೆ ಸೆಕೆಯೂ ಹೆಚ್ಚಾಗಿತ್ತು. ಮಧ್ಯಾಹ್ನ 12.30ರ ವೇಳೆಗೆ ಆಗಸದಲ್ಲಿ ಮೋಡಗಳು ದಟ್ಟಿಸಿದ್ದರಿಂದ ನಗರದಲ್ಲಿ ಕತ್ತಲಿನಂತೆ ಭಾಸವಾಯಿತು.

ADVERTISEMENT

ಮಧ್ಯಾಹ್ನ 1.15ರ ವೇಳೆಗೆ ಹನಿ–ಹನಿಯಾಗಿ ಸಿಡಿದ ಮಳೆ 1.30ರ ಹೊತ್ತಿಗೆ ಬಿರುಸು ಪಡೆಯಿತು. ಜೊತೆಗೆ ಸಣ್ಣ ಗಾಳಿ ಹಾಗೂ ಅಲ್ಲಲ್ಲಿ ಗುಡುಗು, ಸಿಡಿಲಿನ ಆರ್ಭಟವೂ ಕಂಡು ಬಂತು.

ಶುಕ್ರವಾರವೂ ಬೆಳಿಗ್ಗೆಯೂ ಕೆಲ ನಿಮಿಷಗಳ ಕಾಲ ತುಂತುರು ಮಳೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.