ADVERTISEMENT

ಕಲಬುರ್ಗಿ ನಗರಕ್ಕೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 11:59 IST
Last Updated 2 ಜೂನ್ 2019, 11:59 IST
   

ಕಲಬುರ್ಗಿ: ಮಧ್ಯಾಹ್ನದವರೆಗೆ ನಗರದಲ್ಲಿ ಚುರುಗುಟ್ಟುವ ಬಿಸಿಲು ಮತ್ತು ಬಿಸಿ ಗಾಳಿ ಬೀಸುತ್ತಿತ್ತು. ನಂತರ ಬಿರುಗಾಳಿ, ಗುಡುಗಿನೊಂದಿಗೆ ಆರಂಭವಾದ ಬಿರುಸಿನ ಮಳೆಗೆ ನೆಲ ತಂಪಾಗಿದೆ‌.

ಸಂಜೆ 6.30ರವರೆಗೂ ನಗರದಲ್ಲಿ ಉಷ್ಣ ವಾತಾವರಣದ ಅನುಭವವಾಗುತ್ತಿತ್ತು. ಇದೀಗ ತಂಪು ಗಾಳಿ ಬೀಸುತ್ತಿದೆ. ನಗರದಲ್ಲಿ ಇಂದು 42 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು.

ಕಲಬುರ್ಗಿ ನಗರದಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ಜಗತ್ ವೃತ್ತದ ರಸ್ತೆಯಲ್ಲಿರುವ ವಿದ್ಯುತ್ ಕಂಬ ಬಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT