ADVERTISEMENT

ಕಲ್ಬುರ್ಗಿ| ನಗರದಲ್ಲಿ 32 ಮಿ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 16:50 IST
Last Updated 9 ಜೂನ್ 2019, 16:50 IST
ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಭಾನುವಾರ ರಾತ್ರಿ ಸುರಿದ ಮಳೆಯಲ್ಲಿ ಬೈಕ್‌ ಸವಾರರು ಕೊಡೆ ಹಿಡಿದು ಸಾಗಿದ್ದು ಹೀಗೆ
ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಭಾನುವಾರ ರಾತ್ರಿ ಸುರಿದ ಮಳೆಯಲ್ಲಿ ಬೈಕ್‌ ಸವಾರರು ಕೊಡೆ ಹಿಡಿದು ಸಾಗಿದ್ದು ಹೀಗೆ   

ಕಲಬುರ್ಗಿ: ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭಾನುವಾರ ನಸುಕಿನ 3ರಿಂದ 5.50ರವರೆಗೂ ಧಾರಾಕಾರ ಮಳೆ ಸುರಿಯಿತು.

ಎರಡೂವರೆ ತಾಸು ಬಿಟ್ಟೂ ಬಿಡದೆ ಮಳೆ ಸುರಿದಿದ್ದು, 32 ಮಿ.ಮೀ. ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದೆ.

ಶನಿವಾರ ಇಡೀ ದಿನ ಮೋಡ ಕವಿದ ವಾತಾವರಣ ಇದ್ದರೂ ಬಿಸಿಗಾಳಿ ಕಡಿಮೆ ಆಗಿರಲಿಲ್ಲ. ತಡರಾತ್ರಿ ಹದವಾದ ಮಳೆ ಸುರಿದಿದ್ದರಿಂದ ಭಾನುವಾರ ನಗರ ವಾಸಿಗಳಿಗೆ ತಂಪಿನ ಅನುಭವವಾಯಿತು.

ADVERTISEMENT

ಕಳೆದೊಂದ ವಾರದಿಂದ 41 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದ್ದ ನಗರದ ತಾಪಮಾನ, ಭಾನುವಾರ 38 ಡಿಗ್ರಿಗೆ ಇಳಿದಿದೆ.ಬಿಸಿಲಿನ ಆರ್ಭಟಕ್ಕೆ ತತ್ತರಿಸಿದ್ದ ಜನ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.