ಕಲಬುರಗಿ: ‘ರಾಜ್ಯದ ಸಾರಿಗೆ ನಿಗಮಗಳ ಬಾಕಿ ತೀರಿಸಲು ₹ 2,000 ಕೋಟಿ ಸಾಲ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಾಲವನ್ನು ನಿಗಮಗಳು ತೀರಿಸಬೇಕಿಲ್ಲ. ಅದನ್ನು ಸರ್ಕಾರವೇ ತೀರಿಸಲಿದೆ. ಸಾಲ ತೀರಿಸಿದ ಬಳಿಕ ಉಳಿಯುವ ಹಣ ನಿಗಮಗಳಿಗೆ ಮುಂದಿನ ಯೋಜನೆಗಳಿಗೆ ನೆರವಾಗಲಿದೆ’ ಎಂದರು.
‘ಈ ವರ್ಷ 2,000 ಬಸ್‌ಗಳನ್ನು ಖರೀದಿಸಿ ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ತಲಾ 700 ಬಸ್‌ಗಳನ್ನು ನೀಡಲಾಗುವುದು. ಉಳಿದ ಬಸ್‌ಗಳು ಕೆಎಸ್‌ಆರ್‌ಟಿಸಿಗೆ ಸೇರಲಿವೆ. ಬಿಎಂಟಿಸಿಯಿಂದ ಯಾವುದೇ ಬೇಡಿಕೆ ಇಲ್ಲ. ಕೆಕೆಆರ್‌ಟಿಸಿ ಅಧಿಕಾರಿಗಳು ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.