ADVERTISEMENT

ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರೋತ್ಥಾನ ಮಾದರಿ ಶಾಲೆ: ದ್ವಾರಕಾನಾಥ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 16:09 IST
Last Updated 18 ಫೆಬ್ರುವರಿ 2024, 16:09 IST
ಕಲಬುರಗಿ ಹೊರವಲಯದ ರಾಷ್ಟ್ರೋತ್ಥಾನ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು
ಕಲಬುರಗಿ ಹೊರವಲಯದ ರಾಷ್ಟ್ರೋತ್ಥಾನ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು   

ಕಲಬುರಗಿ: ‘ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ರಾಷ್ಟ್ರೋತ್ಥಾನ ಶಾಲೆಗಳನ್ನು ನಡೆಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಮಾದರಿ ಶಾಲೆ ನಿರ್ಮಿಸಿ ಅವುಗಳ ಮೂಲಕ ಪರಿಷತ್ತಿನ ಹಲವಾರು ಪ್ರಕಲ್ಪಗಳನ್ನು ರಾಜ್ಯದ ಕೊನೆಯ ಗ್ರಾಮಕ್ಕೂ ತಲುಪಿಸುವ ಪ್ರಯತ್ನದಲ್ಲಿದ್ದೇವೆ‘ ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷ ದ್ವಾರಕಾನಾಥ್ ತಿಳಿಸಿದರು. 

ನಗರದ ಹೊರವಲಯದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೋತ್ಥಾನದ ಮಕ್ಕಳು, ಅವರ ಮೂಲಕ ಪೋಷಕರು ಹಾಗೂ ಸಮಾಜವನ್ನು ತೊಡಗಿಸಿಕೊಳ್ಳುವ ಪ್ರಯತ್ನ ನಡೆದಿದೆ‘ ಎಂದರು.  

ಉದ್ಯಮಿ ಶ್ರೀರಾಮ ಪವಾರ ಮಾತನಾಡಿ, ‘ಭವ್ಯ ಭಾರತದ ಬುನಾದಿ ಸ್ವರಾಷ್ಟ್ರನಿಷ್ಠ ಪ್ರಜೆಗಳಿಂದಲೇ ಸಾಧ್ಯ. ಅಂತಹ ಪ್ರಜೆಗಳ ನಿರ್ಮಾಣ ರಾಷ್ಟ್ರೋತ್ಥಾನದಂತಹ ಶಾಲೆಗಳಿಂದಲೇ ಸಾಧ್ಯ‘ ಎಂದು ಹೇಳಿದರು.

ADVERTISEMENT

ಬಾಲರಾಮ ಪ್ರತಿಷ್ಠಾಪನಾ ವರ್ಷದ ಅಂಗವಾಗಿ ರಾಮೋತ್ಸವ ಅದ್ಧೂರಿಯಾಗಿ ನೆರವೇರಿತು.

ಪ್ರಸ್ತಾವಿಕವಾಗಿ ಮಾತನಾಡಿದ ಶಾಲೆಯ ಕರೆಸ್ಪಾಂಡೆಂಟ್ ಕೃಷ್ಣ ಜೋಶಿ, ಕಲಬುರಗಿ ನಗರದಲ್ಲಿ ಶಾಲೆ ಬೆಳೆದು ಬಂದ ಹಾದಿಯನ್ನು ನಿರೂಪಿಸುತ್ತಾ ಪಾಲಕರ ಹಾಗೂ ನಗರದ ಪ್ರಜ್ಞಾವಂತ ಜನರ ಬೆಂಬಲ ಹಾಗೂ ಮಾರ್ಗದರ್ಶನವನ್ನು ಶ್ಲಾಘಿಸಿದರು.

ಶಾಲೆಯ ಪ್ರಾಚಾರ್ಯ ಗಿರೀಶ ಜೋಶಿ ಅವರು ವಂದಿಸಿದರು. ಕಾರ್ಯಕ್ರಮವನ್ನು ರವಿಕುಮಾರ್ ನಿರೂಪಿಸಿದರು.

ನಂತರ ಶಾಲಾ ಮಕ್ಕಳು ಸಾಂಸ್ಕೃತಿಕ ಕಲಾಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮವು ರಾಮಾಯಣದ ಕಥೆಗಳು ಹಾಗೂ ನೃತ್ಯಗಳನ್ನು ಒಳಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.