ಬಂಧನ
(ಪ್ರಾತಿನಿಧಿಕ ಚಿತ್ರ)
ಜೇವರ್ಗಿ (ಕಲಬುರಗಿ ಜಿಲ್ಲೆ): ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾ, ಮದೀನಾ ಮಸೀದಿ ಹಾಗೂ ಕಾಬಾ ಕುರಿತು ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ಆಗುವಂತೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕ, ಯಡ್ರಾಮಿ ತಾಲ್ಲೂಕಿನ ಇಜೇರಿಯ ಆನಂದ ಗುತ್ತೇದಾರ (22) ನನ್ನು ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಯು ಆಕ್ಷೇಪಾರ್ಹ ಪೋಸ್ಟ್ ಜೊತೆಗೆ ಹಿಂದಿಯಲ್ಲಿ ಭಾಷೆಯಲ್ಲಿ ‘ಸನಾತನಿ ಹೋ ತೋ ಕಮೆಂಟ್ ಮೆ ಲಿಕೋ ಜೈ ಶ್ರೀರಾಮ’ ಅಂತ ಬರೆದಿದ್ದರು’ ಎಂದು ಆರೋಪಿಸಿ ಸೈಯದ್ ಪಟೇಲ್ ಕಾಲೇಗೌಡಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಮುಸಲ್ಮಾನರ ಧಾರ್ಮಿಕ ಸ್ಥಳಗಳಿಗೆ ಅವಮಾನ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮುಸ್ಲಿಮರು ಶನಿವಾರ ರಾತ್ರಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.