ADVERTISEMENT

ಹಂದರ ಅಂಬಲಿ‌ ಸವಿದ ಸಾವಿರಾರು ಭಕ್ತರು

ಚಿಂಚೋಳಿ: ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆಗೆ ವಿದ್ಯುಕ್ತ ತೆರೆ,

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 5:02 IST
Last Updated 18 ಮಾರ್ಚ್ 2022, 5:02 IST
ಚಿಂಚೋಳಿ ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಮಠದಲ್ಲಿ ಗುರುವಾರ ರಾತ್ರಿ ನಡೆದ ಹಂದರ ಅಂಬಲಿ ಕಾರ್ಯಕ್ರಮದಲ್ಲಿ ಭಕ್ತರು ಕಡಬು ಭಜ್ಜಿ ಸವಿದರು
ಚಿಂಚೋಳಿ ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ ಮಠದಲ್ಲಿ ಗುರುವಾರ ರಾತ್ರಿ ನಡೆದ ಹಂದರ ಅಂಬಲಿ ಕಾರ್ಯಕ್ರಮದಲ್ಲಿ ಭಕ್ತರು ಕಡಬು ಭಜ್ಜಿ ಸವಿದರು   

ಚಿಂಚೋಳಿ: ಪಟ್ಟಣದ ಹಾರಕೂಡ ಚನ್ನಬಸವ ಶಿವಯೋಗಿಗಳ 71ನೇ ಜಾತ್ರೆ ನಿಮಿತ್ತ ಗುರುವಾರ ಹೋಳಿ‌ ಹುಣ್ಣಿಮೆಯ ಚತುರ್ದಶಿಯಂದು ಸಾವಿರಾರು ಭಕ್ತರು ಶ್ರೀಮಠದಲ್ಲಿ ಹಂದರ ಅಂಬಲಿ ಸವಿದರು.

4 ಕ್ವಿಂಟಲ್ ಜೋಳ, 6 ಕ್ವಿಂಟಲ್ ಅಕ್ಕಿ, 1 ಕ್ವಿಂಟಲ್ ಕಡಲೆ ಹಿಟ್ಟು(ಭಜ್ಜಿ), 1ಕ್ವಿಂಟಲ್ ಹಿಂಡಿ ಪಲ್ಲೆ, 1 ಕ್ವಿಂಟಲ್ ಈರುಳ್ಳಿ ಗಡ್ಡೆ ಬಳಸಿಕೊಂಡು‌ ಕಡಬು, ಭಜ್ಜಿ, ತರಕಾರಿ ಮತ್ತು ಕಾಳು ಪಲ್ಲೆ ಹಾಗೂ ಈರುಳ್ಳಿ ಚಟ್ನಿಯನ್ನು ತಯಾರಿಸಲಾಗಿತ್ತು.

ಸಂಜೆ 7.30ರಿಂದ ಸಂಜೆಗೆ ಅಡುಗೆಯಾದ ನಂತರ ಸಂಪ್ರದಾಯದಂತೆ ನೈವೇದ್ಯ ತೆಗೆದುಕೊಂಡು ತೇರು ಮೈದಾನಕ್ಕೆ ತೆರಳಿ ಮೈದಾನದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದರು .ನಂತರ ಭಕ್ತರು ಶ್ರೀಮಠದಲ್ಲಿ ಹಂದರ ಅಂಬಲಿ ಸವಿದರು

ADVERTISEMENT

ಜಾತ್ರೆಗೆ ತೆರೆ: ಹಂದರ್ ಅಂಬಲಿ ಜಾತ್ರೆಯ ಕೊನೆಯ ಕಾರ್ಯಕ್ರಮ ಈ ಮೂಲಕ 71ನೇ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು. ರಾತ್ರಿ 9 ಗಂಟೆಗೆ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಶ್ರೀಮಠಕ್ಕೆ ಆಗಮಿಸಿದರು. ಸುಮಾರು 5ಸಾವಿರಕ್ಕೂ ಅಧಿಕ ಭಕ್ತರು ಹಂದರ ಅಂಬಲಿ ಸವಿದಿದ್ದಾರೆ.

ಕಾರ್ಯಕ್ರಮದಲ್ಲಿ ರಾಜಶೇಖರ ಮಜ್ಜಗಿ, ರೇವಣಸಿದ್ದಪ್ಪ‌ ಮಜ್ಜಗಿ,ಸುಭಾಷ ಸೀಳಿನ್, ರವಿಕಾಂತ ಹುಸೇಬಾಯಿ, ಶಂಕರಗೌಡ ಅಲ್ಲಾಪುರ, ಗುಂಡಯ್ಯ ಸ್ವಾಮಿ,ಮಲ್ಲಿಕಾರ್ಜುನ ಅಲ್ಲಾಪುರ, ರಾಜು‌ ಬೀರನಳ್ಳಿ, ಸಂತೋಷ ಭೋಜಿ, ನಾಗರಾಜ ಮಲಕೂಡ, ರಾಜು ಪಟಪಳ್ಳಿ, ಸಂಗಮೇಶ ಮೂಲಿಮನಿ, ಶಶಿಧರ ಯಾಲಾಲ, ನಾಗಶೆಟ್ಟಿ ಯಂಪಳ್ಳಿ, ಬಸವಣ್ಣ ಸುಂಕದ, ರಾಜು ಕೊರಡಂಪಳ್ಳಿ, ಕಾಶಪ್ಪ ಗಿರಿಗಿರಿ, ಈರಪ್ಪ ಬೀರನಳ್ಳಿ, ಅಮೃತರಾವ್ ಕೊಡಂಗಲ್, ಸುನೀಲದತ್ತ ಬಾಸುತಕರ, ಮಹಾಂತೇಶ ಮಠಪತಿ, ರಾಜು ಸಾಲಿ‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.