ADVERTISEMENT

ಚಿಂಚೋಳಿ: ವಿವಿಧೆಡೆ ಸಂಭ್ರಮದ 77ನೇ ಗಣರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:48 IST
Last Updated 27 ಜನವರಿ 2026, 7:48 IST
ಚಿಂಚೋಳಿ ಬಳಿಯ ಪೋಲಕಪಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಸನ್ಮಾನಿಸಿದರು
ಚಿಂಚೋಳಿ ಬಳಿಯ ಪೋಲಕಪಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಸನ್ಮಾನಿಸಿದರು   

ಚಿಂಚೋಳಿ: ‘ವಿವಿಧತೆ ಏಕತೆ ಭಾರತದ ಜೀವಾಳವಾಗಿದೆ. ಆದರೆ, ಕೆಲವು ಶಕ್ತಿಗಳು ಜಾತಿ ಧರ್ಮದ ಕುರಿತಾಗಿ ಭಿನ್ನ ನಿಲುವು ಹುಟ್ಟು ಹಾಕುಲಾಗುತ್ತಿದೆ ಹೀಗಾಗಿ ನಾಗರಿಕರು ಇಂತಹ ಶಕ್ತಿಗಳ ಬಗೆಗೆ ಜಾಗೃತರಾಗಿಸಬೇಕು’ ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ಅವರು ಪೋಲಕಪಳ್ಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ರಾಧಿಕಾ ಮಂಗಳಮೂರ್ತಿ ಗಡಿಕೇಶ್ವಾರ, ಶಾಲಿನಿ ಭೂಂಯಾರ್, ಗೌರಮ್ಮ ಐನಾಪುರ ಅವರಿಗೆ ಸರ್ಕಾರದಿಂದ ಉಚಿತ ಲ್ಯಾಪಟಾಪ್ ವಿತರಿಸಲಾಯಿತು.

ADVERTISEMENT

ನಂತರ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನರಸಮ್ಮ ಅವುಂಟಿ, ಬಕ್ಕಪ್ಪ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕ ಸುರೇಶ ಠಾಕೂರ, ರಾಜ್ಯಮಟ್ಟದ ಪುರಸ್ಕಾರ ಪಡೆದ ಗಾರಂಪಳ್ಳಿ ಗ್ರಾಮ ಆಡಳಿತಾಧಿಕಾರಿ ಲಿಖಿತಾ ಮಂಜುನಾಥ, ಅಂಗನವಾಡಿ ಕಾರ್ಯಕರ್ತೆ ಜಯಶೀಲಾ, ಕುಂಚಾವರಂನ ವೆಂಕಟರೆಡ್ಡಿ ಕಸ್ತೂರಿ, ಜೆಸ್ಕಾಂ ಲೈನಮೆನ್ ಮಾಣಿಕ ಮೊಗಲಪ್ಪ, ಪತ್ರಕರ್ತ ಶಿವರಾಜ ವಾಲಿ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಸಂಗಮನಾಥರೆಡ್ಡಿ ಹಿರೇಮಠ, ಸರ್ಕಲ್ ಇನಸ್ಪೆಕ್ಟರ್ ಕಪಿಲದೇವ, ತಾ.ಪಂ ಇಒ ಸಂತೋಷ ಚವ್ಹಾಣ, ಟಿಎಚ್‌ಒ ಡಾ.ಮಹಮದ್ ಗಫಾರ್, ಬಿಇಒ ಲಕ್ಷ್ಮಯ್ಯ, ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ, ಎಇಇ ಅಂಬಾರಾಯ ಮಹಾಗಾಂವ್, ಪ್ರವೀಣಕುಮಾರ, ಕಾಮಣ್ಣ ಇಂಜಳ್ಳಿ, ಗ್ರೇಡ್-2 ತಹಶೀಲ್ದಾರ್‌ ವೆಂಕಟೇಶ ದುಗ್ಗನ್ ಮತ್ತಿತರರು ಇದ್ದರು.

ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಅಶೋಕ ಹೂವಿನಭಾವಿ ನಿರೂಪಿಸಿದರು. ಜಯಪ್ಪ ಚಾಪಲ್ ವಂದಿಸಿದರು. ಇದಕ್ಕೂ ಮೊದಲು ಸಬ್ ಇನಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಹಾಗೂ ವಿವಿಧ ಶಾಲ ಮಕ್ಕಳಿಂದ ದೇಶದ ವಿವಿಧ್ಯತೆ, ಸಂವಿಧಾನ, ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಚಿಂಚೋಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ರಾಷ್ಟçಧ್ವಜಾರೋಹಣ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.