ADVERTISEMENT

ವಿಶ್ವರೂಪ ಮಹಾಸಭಾ ಸಮಾವೇಶದಲ್ಲಿ ಭಾಗವಹಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 13:17 IST
Last Updated 10 ನವೆಂಬರ್ 2023, 13:17 IST
ಬಸವರಾಜ ಕಾಳಗಿಕರ್
ಬಸವರಾಜ ಕಾಳಗಿಕರ್   

ಸೇಡಂ: ಹೈದರಾಬಾದಿನ ಪರೇಡ್ ಮೈದಾನದಲ್ಲಿ ನವೆಂಬರ್ 11 ರಂದು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ಮಾದಿಗ ಸಮಾಜದ ರಾಷ್ಟ್ರನಾಯಕ ಮಂದಾಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಮಾದಿಗರ ವಿಶ್ವರೂಪ ಮಹಾಸಭಾ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮಾದಿಗ ಸಮಾಜದವರು ಪಾಲ್ಗೊಳ್ಳಬೇಕು’ ಎಂದು ಶಿವಶರಣ ಶ್ರೀ ಮಾದಾರ ಚನ್ನಯ್ಯ ಜನಜಾಗೃತಿ ವೇದಿಕೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕಾಳಗಿಕರ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದಿನ ಬಿಜೆಪಿ ಸರ್ಕಾರ ಮಾರ್ಚ್ 03.2023ರಲ್ಲಿ ಸದರಿ ವರದಿಯನ್ನು ಕೇಂದ್ರ ಸಚಿವ ಸಂಪುಟದಲ್ಲಿ ಮಂಡಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದನ್ನು ಜಾರಿಗೊಳಿಸಲು ನಾಯಕ ಮಂದಾಕೃಷ್ಣ ಮಾದಿಗ ಅವರು ಬೃಹತ್ ಸಮಾವೇಶವನ್ನೇ ಆಯೋಜಿಸಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದು, ಸೇಡಂ ತಾಲ್ಲೂಕಿನಿಂದ ಸುಮಾರು 500ಕ್ಕೂ ಅಧಿಕ ಸಂಖ್ಯೆಯ ಜನರು ತೆರಳಲಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧೆಡೆಯಿಂದ ಮಾದಿಗ ಸಮಾಜದ ಬಂಧುಗಳ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶಿವಶರಣಮಾದಾರ ಚೆನ್ನಯ್ಯ ಜನ ಜಾಗೃತಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ವಾಲಿಕರ, ಜಗನ್ನಾಥ ಬಿಜನಳ್ಳಿ, ಭೀಮರಾವ ಕಟ್ಟಿಮನಿ, ಸಾಬಣ್ಣ ರಾಜೋಳಿಕರ್, ಸಾಯಿಬಣ್ಣ ಯಾದಗಿರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.