ADVERTISEMENT

ಪಂಪ್‌ಸೆಟ್‌ಗಳಿಗೆ 12 ಗಂಟೆಗೆ ವಿದ್ಯುತ್‌ಗೆ ಒತ್ತಾಯ

ಆರ್‌ಕೆಎಸ್‌ ನೇತೃತ್ವದಲ್ಲಿ ನಾಲವಾರ ಭಾಗದ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:34 IST
Last Updated 2 ಡಿಸೆಂಬರ್ 2020, 2:34 IST
ಚಿತ್ತಾಪುರ ತಾಲ್ಲೂಕಿನ ನಾಲವಾರ ವಲಯದ ಲಾಡ್ಲಾಪುರ ಹಾಗೂ ಹಣ್ಣಿಕೇರಾ ಗ್ರಾಮಗಳ ಪಂಪ್ ಸೆಟ್‌ಗಳಿಗೆ 12 ಗಂಟೆ ನಿರಂತರ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತ ಕೃಷಿಕಾರ್ಮಿಕರ ಸಂಘಟನೆ ಮಂಗಳವಾರ ಕಲಬುರ್ಗಿಯ ಜೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ಮಾಡಿದರು
ಚಿತ್ತಾಪುರ ತಾಲ್ಲೂಕಿನ ನಾಲವಾರ ವಲಯದ ಲಾಡ್ಲಾಪುರ ಹಾಗೂ ಹಣ್ಣಿಕೇರಾ ಗ್ರಾಮಗಳ ಪಂಪ್ ಸೆಟ್‌ಗಳಿಗೆ 12 ಗಂಟೆ ನಿರಂತರ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತ ಕೃಷಿಕಾರ್ಮಿಕರ ಸಂಘಟನೆ ಮಂಗಳವಾರ ಕಲಬುರ್ಗಿಯ ಜೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ಮಾಡಿದರು   

ಕಲಬುರ್ಗಿ: ಚಿತ್ತಾಪುರ ತಾಲ್ಲೂಕಿನ ನಾಲವಾರ ವಲಯದ ಲಾಡ್ಲಾಪುರ ಮತ್ತು ಹಣ್ಣಿಕೇರಾ ಗ್ರಾಮಗಳ ಪಂಪ್‌ಸೆಟ್‌ಗಳಿಗೆ ಮಾರ್ಚ್‌ ತಿಂಗಳವರೆಗೆ ನಿತ್ಯ 12 ಗಂಟೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಜೆಸ್ಕಾಂ ಕೇಂದ್ರ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಎರಡೂ ಗ್ರಾಮಗಳ ರೈತರು ಶೇಂಗಾ ಬೆಳೆಯುತ್ತಿದ್ದು, ಏಳು ಗಂಟೆ ವಿದ್ಯುತ್ ಸಾಕಾಗುತ್ತಿಲ್ಲ. ಆದ್ದರಿಂದ ಕನಿಷ್ಠ 12 ಗಂಟೆ ವಿದ್ಯುತ್ ಪೂರೈಸಬೇಕು. ಅದರಲ್ಲೂ ರಾತ್ರಿ ಪಾಳಿ, ಹಗಲು ಪಾಳಿಯಂತೆ ವಿದ್ಯುತ್ ಕೊಡುತ್ತಿರುವುದರಿಂದ ರೈತರಿಗೆ ಕಷ್ಟವಾಗುತ್ತಿದೆ. ಈ ಬಾರಿ ಕೊಳವೆಬಾವಿ ಆಶ್ರಿತ ರೈತರು ಹೆಚ್ಚು ಶೇಂಗಾ ಬೆಳೆದಿದ್ದು, ರಾತ್ರಿ ಪಾಳಿಯಲ್ಲಿ ಬಿಡುತ್ತಿರುವ ಏಳು ಗಂಟೆ ವಿದ್ಯುತ್ ಸಾಕಾಗುತ್ತಿಲ್ಲ. ಹಾಗಾಗಿ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಆರ್‌ಕೆಎಸ್‌ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ., ರೈತರಾದ ಗುಂಡಣ್ಣಾ, ಮಲ್ಲಿಕಾರ್ಜುನ, ಶರಣಪ್ಪ, ಅನಿಲ್‌ಗೌಡ, ಬಸವರಾಜ, ರಮೇಶ, ಬನ್ನಪ್ಪ ಸಾಹುಕಾರ, ಸಾಬಣ್ಣ, ಮಲ್ಲಣ್ಣ ದಾಡಭಾ, ಭೀಮರಾಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.