ADVERTISEMENT

₹ 10 ಕೋಟಿ ಮೊತ್ತದ ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:08 IST
Last Updated 8 ಜುಲೈ 2025, 5:08 IST
ಕಲಬುರಗಿ ತಾಲ್ಲೂಕಿನ ನಂದೂರು (ಬಿ) ಗ್ರಾಮದಲ್ಲಿ ಸೋಮವಾರ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಬಸವರಾಜ ಮತ್ತಿಮಡು ನೆರವೇರಿಸಿದರು
ಕಲಬುರಗಿ ತಾಲ್ಲೂಕಿನ ನಂದೂರು (ಬಿ) ಗ್ರಾಮದಲ್ಲಿ ಸೋಮವಾರ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಬಸವರಾಜ ಮತ್ತಿಮಡು ನೆರವೇರಿಸಿದರು   

ಕಲಬುರಗಿ: ತಾಲ್ಲೂಕಿನ ನಂದೂರು (ಬಿ) ಗ್ರಾಮದಲ್ಲಿ ₹ 10 ಕೋಟಿ ಮೊತ್ತದ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು ಶಾಸಕ ಬಸವರಾಜ ಮತ್ತಿಮಡು ಅವರು ಸೋಮವಾರ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ‘ಎಸ್‌ಎಚ್‌ಡಿಪಿ ಯೋಜನೆಯಡಿ ನಂದೂರ (ಬಿ) ಗ್ರಾಮದಿಂದ ಬಾಪೂನಾಯಕ ತಾಂಡಾವರೆಗಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಇನ್ನಷ್ಟು ಸುಧಾರಣೆ ಮಾಡಲಾಗುವುದು’ ಎಂದರು.

‘ಈ ರಸ್ತೆ ನಂದೂರು ಹಾಗೂ ಬಾಪುನಾಯಕ್ ತಾಂಡಾ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರಿಗೂ ಸಹಕಾರಿಯಾಗಲಿದೆ’ ಎಂದು ಮುಖಂಡ ರಾಜಕುಮಾರ ಚವ್ಹಾಣ್ ಹೇಳಿದರು.

ADVERTISEMENT

ನಂದೂರಿನ ಗಂಗಾಧರ ಹಿರೇಮಠ ಸ್ವಾಮೀಜಿ, ಗ್ರಾಮಿಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ ಬೋಧನ, ಮುಖಂಡರಾದ ವಿನೋದ ಪಾಟೀಲ ಸರಡಗಿ, ಮಹಾಂತಗೌಡ ಪಾಟೀಲ, ನಾಗರಾಜ ಕಲ್ಲಾ, ರೇವಣಸಿದ್ದ ಸ್ವಾಮಿ, ಅರುಣಕುಮಾರ್ ಪಾಟೀಲ, ಅಶೋಕ ಬಬಲಾದ, ಶಕಂರ ಜಾಧವ, ರೇಣುಕಾ ರಾಠೋಡ, ಮುನ್ನಾಗೌಡ ಜಾಪೂರ, ಅರುಣ ರಾಠೋಡ, ಬಿಕ್ಕುಸಿಂಗ್ ರಾಠೋಡ, ಗುತ್ತಿಗೆದಾರ ಸಂಗಮೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.