ಕಲಬುರಗಿಯಲ್ಲಿ ವಿಜಯದಶಮಿ ಅಂಗವಾಗಿ ನಡೆದ ಆರ್ ಎಸ್ ಎಸ್ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿಗಳು
ಕಲಬುರಗಿ: ಆರ್‌ಎಸ್‌ಎಸ್ ಸಂಘಟನೆಯಿಂದ ವಿಜಯದಶಮಿ ಉತ್ಸವ ಅಂಗವಾಗಿ ನಗರದಲ್ಲಿ ಭಾನುವಾರ ಸಾವಿರಾರು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ನಗರದ ನೆಹರೂ ಗಂಜ್ ಎಪಿಎಂಸಿಯಲ್ಲಿ ಮಧ್ಯಾಹ್ನ 3.30 ಹೊತ್ತಿಗೆ ಜಮಾಯಿಸಿದ ಗಣವೇಷಧಾರಿಗಳು 3.45ಕ್ಕೆ ಪಥಸಂಚಲನ ಆರಂಭಿಸಿದರು.
ಸಂಘದ ಸಮವಸ್ತ್ರ ಧರಿಸಿದ ಸಾವಿರಾರು ಜನರು ಎಡಗೈನಲ್ಲಿ ಲಾಠಿ ಹಿಡಿದು ಶಿಸ್ತಿನಿಂದ ಹೆಜ್ಜೆ ಹಾಕುತ್ತ ಹೊರಟರು.
ಗಂಜ್ ನಿಂದ ಹೊರಟ ಪಥಸಂಚಲನ ಮೆರವಣಿಗೆ ಚಡ್ಡಿ ಹೋಟೆಲ್, ಮಿಜಗುರಿ, ಡಂಕಾ ಕ್ರಾಸ್, ಹಿಂಗುಲಾಂಬಿಕಾ ಮಂದಿರ, ಗಣೇಶ ಮಂದಿರ, ಸರಾಫ್ ಬಜಾರ್, ಕಪಡಾ ಬಜಾರ್, ಚೌಕ, ಜನತಾ ವೃತ್ತ, ಕಲಬುರಗಿ ತಹಶೀಲ್ದಾರ್ ಕಚೇರಿ ಎದುರಿನಿಂದ ಜಗತ್ ವೃತ್ತ, ಯಲ್ಲಮ್ಮ ದೇವಸ್ಥಾನದ ಎದುರಿನಿಂದ ಶರಣಬಸವೇಶ್ವರ ಜಾತ್ರಾ ಮೈದಾನ ತಲುಪಿತು.
ಮೆರವಣಿಗೆಯುದ್ದಕ್ಕೂ ಗಣ ವೇಷಧಾರಿಗಳಿಗೆ ಪುಷ್ಪಚೆಲ್ಲಿ ಗೌರವ ಅರ್ಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.