ADVERTISEMENT

ಭಕ್ತಿ, ಶ್ರದ್ಧೆಯ ಸಂದಲ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 15:45 IST
Last Updated 8 ಜೂನ್ 2025, 15:45 IST
ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದ ಬ್ರೆಹಿಲೂಲ್ ಷಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆ ಭಾನುವಾರ ನಡೆಯಿತು
ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದ ಬ್ರೆಹಿಲೂಲ್ ಷಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆ ಭಾನುವಾರ ನಡೆಯಿತು   

ಪ್ರಜಾವಾಣಿ ವಾರ್ತೆ

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಬ್ರೆಹಿಲೂಲ್ ಷಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆಯ ಭಕ್ತಿ ಶ್ರದ್ಧೆಯಿಂದ ಭಾನುವಾರ ಜರುಗಿತು.
ಉರುಸ್ ಅಂಗವಾಗಿ‌ ದರ್ಗಾಕ್ಕೆ ವಿದ್ಯುದ್ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.

ಸಂಪ್ರದಾಯದಂತೆ ಜಹಿರುದ್ದೀನ್‌ ಪಟೇಲ ಮನೆಯಿಂದ ಗಂಧದ ಮೆರವಣಿಗೆ ಪ್ರಾರಂಭವಾಯಿತು. ಮುಖ್ಯ ಬೀದಿಗಳ ಮೂಲಕ ದೇವರನಾಮ ಸ್ಮರಣೆ ಜತೆಗೆ ಮೀಲಾದ ಹಾಡುವ ತಂಡ, ಹಲಗಿ, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಗಂಧದ ಚಾದರನ್ನು ದರ್ಗಾಕ್ಕೆ ತರಲಾಯಿತು.

ADVERTISEMENT

ಪ್ರಾರ್ಥನೆ ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಿದರು. ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ಹರಕೆ ಸಲ್ಲಿಸಿದರು.

ಮರಳಿ ಮೆರವಣಿಗೆ ಮೂಲಕ ಸಂದಲ್ ಸಾಹೇಬ, ಮೈಬೂಬಸುಭಾನಿ ದರ್ಗಾ, ನವಾಬ ಸಾಹೇಬ ಹಾಗೂ ಷಾಹ ಹುಸೇನ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪುನಃ ಗಂಧದ ಮೆರವಣಿಗೆಯು ಜಹಿರೋದ್ದಿನ ಪಟೇಲ್ ಅವರ ಮನಗೆ ಬಂದು ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ಜಾಮಿಯಾ ಮಜೀದ್ ಮೌಲಾನಾ ಹುಸೇನ್ ಹಾಷ್ಮಿ ಜಹಿರೊದ್ದೀನ್‌ ಪಟೇಲ್, ಚಾಂದಪಾಷಾ ಮೋಮಿನ, ರಹೀಂ ಸಾಬ್, ತಯ್ಯಬ ಮೋಮೀನ, ಜಾಕೀರ ಪಟೇಲ, ಮನ್ನಾನ ಮೋಮಿನ, ರಜಾಕ ಪಟೇಲ, ರೋ‌‍ಷನ್ ಆಲಿ ಮೋಮಿನ,ಅಹ್ಮದ ಖಾನ್‌ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.