
ಅಫಜಲಪುರ: ‘ಪೌರಕಾರ್ಮಿಕ ಸೇವಾ ಕಾರ್ಯವನ್ನು ಸಮಾಜದ ಪ್ರತಿಯೊಬ್ಬರೂ ಸ್ಮರಿಸುವುದು ಆದ್ಯ ಕರ್ತವ್ಯವಾಗಿದೆ. ಸ್ವಚ್ಛ, ಸುಂದರ ಸಮಾಜ ನಿರ್ಮಾಣದ ಜತೆಗೆ ಸಾರ್ವಜನಿಕರ ಆರೋಗ್ಯಕ್ಕಾಗಿ ನಿತ್ಯ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕೊಡುಗೆ ಶ್ಲಾಘನೀಯವಾಗಿದೆ’ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಪುರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ, ಸನ್ಮಾನ ಹಾಗೂ ಕ್ರೀಡಾಕೂಟದ ವಿಜೇತರಿಗೆ ಪ್ರಶಸ್ತಿ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಜಟ್ಟೆಪ್ಪ ಜಾಮಗೊಂಡ ಮಾತನಾಡಿ, ‘ಪೌರ ಕಾರ್ಮಿಕರಿಗೆ ಪುರಸಭೆಯಿಂದ ಆರೋಗ್ಯಾತ್ಮಕ ಸಲಕರಣೆಗಳು ವಿತರಿಸಲಾಗಿದೆ. ಪ್ರತಿವರ್ಷ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ’ ಎಂದರು
ಪೌರಕಾರ್ಮಿಕರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಸುಲೇಕರ ಹಾಗೂ ತಾಲ್ಲೂಕಾಧ್ಯಕ್ಷ ಸಂತೋಷ ಚಲವಾದಿ ಅವರುಗಳು ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಮನವಿ ಪತ್ರವನ್ನು ಶಾಸಕರಿಗೆ ನೀಡಿ, ಆದಷ್ಟು ಬೇಗನೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಡಿಸೆಂಬರ್ ತಿಂಗಳಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ನಮ್ಮ ವಿಷಯ ಪ್ರಸ್ತಾಪ ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಸುಹಾಸಿನಿ ಖೇಳಗಿ, ಉಪಾಧ್ಯಕ್ಷ ಶಿವು ಪದಕಿ, ತಾಪಂ ಇಒ ವೀರಣ್ಣ ಕೌಲಗಿ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಮುಖ್ಯಾಧಿಕಾರಿ ಜಟ್ಟೆಪ್ಪ ಜಾಮಗೊಂಡ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ ಪೂಜಾರಿ, ಕಾರ್ಯದರ್ಶಿಗಳಾದ ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಾರ್ಥ ಬಸರಿಗಿಡ, ಪುರಸಭೆ ಸದಸ್ಯರುಗಳಾದ ರವಿ ನಂದಶೆಟ್ಟಿ, ಸೈಫನ್‌ಸಾಬ್ ಚಿಕ್ಕಳಗಿ, ವಿಶ್ವನಾಥ ಮಲಘಾಣ, ಶ್ರೀಧರ ರಾಠೋಡ್, ಮಹಾನಿಂಗ ಅಂಗಡಿ, ಮಲ್ಲಯ್ಯ ಹೊಸಮಠ, ಪ್ರವೀಣ ಕಲ್ಲೂರ, ಸಂತೋಷ ಚಲವಾದಿ, ಶಿವಪುತ್ರಪ್ಪ ಜಿಡ್ಡಗಿ, ನಿಂಗಪ್ಪ ಪಾಟೋಳಿ, ಕಿರಣ ಸುಲೇಲರ, ರಾಜುಗೌಡ ಪಾಟೀಲ್, ಸಂಜೀವಕುಮಾರ ಪಟೇದಾರ್, ಸುಮನ್ ನಂದಗೇರಿ, ಶಾಹೀದಾ, ಅಶೋಕ ಶಿವನೂರ, ರಾಜು ಜಮಾದಾರ, ಭೀಮರಾಯ ಬಬಲೇಶ್ವರ, ಸುರೇಶ ಶಿರ, ಅನ್ವರ, ರಮೇಶ ಯಾತನೂರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.