ADVERTISEMENT

ಕಲಬುರಗಿ: ಸಂತ ಸೇವಾಲಾಲ ಜಯಂತಿ ಇಂದು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:13 IST
Last Updated 15 ಫೆಬ್ರುವರಿ 2026, 4:13 IST
ಸಾಗರ್ ರಾಠೋಡ
ಸಾಗರ್ ರಾಠೋಡ   

ಕಲಬುರಗಿ: ‘ಸಂತ ಸೇವಾಲಾಲ ಮಹಾರಾಜರ 287ನೇ ಜಯಂತಿ ಅಂಗವಾಗಿ ಫೆ.15ರಂದು ಬೆಳಿಗ್ಗೆ 11 ಗಂಟೆಗೆ ನಗರೇಶ್ವರ ಶಾಲೆಯಿಂದ ಎಸ್‌.ಎಂ. ಪಂಡಿತ ರಂಗಮಂದಿರದವರೆಗೆ ಸೇವಾಲಾಲರ ಭಾವಚಿತ್ರದ ಭವ್ಯ ಮೆರವಣಿಗೆ ನcಡೆಸಲಾಗುವುದು’ ಎಂದು ಜಯಂತಿ ಸಮಿತಿ ಅಧ್ಯಕ್ಷ ಸಾಗರ್ ರಾಠೋಡ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧ್ಯಾಹ್ನ 3 ಗಂಟೆಗೆ ಜಿಲ್ಲಾಡಳಿತದಿಂದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ನಡೆಯಲಿದೆ. ಸಮಾಜದ ಗುರುಗಳಾದ ಬಾಬುಸಿಂಗ್‌ ಮಹಾರಾಜ, ಬಳಿರಾಮ ಮಹಾರಾಜ, ಮುರಾಹರಿ ಮಹಾರಾಜ, ಜೇಮಸಿಂಗ್‌ ಮಹಾರಾಜ, ಪರಶುರಾಮ ಮಹಾರಾಜ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಗಣಪತಿ ರಾಠೋಡ ಉಪನ್ಯಾ‌ಸ ನೀಡುವರು’ ಎಂದರು.

ಮುಂದೂಡಿಕೆ: ಜಯಂತಿ ಪ್ರಯುಕ್ತ ಭಾನುವಾರ ಸಂಜೆ ನಗರದ ಬಂಜಾರ ಭವನದಲ್ಲಿ ಹಮ್ಮಿಕೊಂಡಿದ್ದ ಬಂಜಾರ ಸಾಂಸ್ಕೃತಿಕ ಉತ್ಸವವನ್ನು ಫೆ.16ರಂದು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಬಾಲಿವುಡ್ ಗಾಯಕ ಸಂಜು ರಾಠೋಡ್ ಸೇರಿದಂತೆ ಸಿನಿಮಾ ಕಲಾವಿದರು, ಗಾಯಕರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ADVERTISEMENT

ಬಿಜೆಪಿ ಮುಖಂಡ ಮಣಿಕಂಠ ರಾಠೋಡ, ಪಾಲಿಕೆ ಸದಸ್ಯ ಕೃಷ್ಣಾ ನಾಯಕ, ಮಹೇಶ ನಾಯಕ, ಪ್ರವೀಣ ಜಾಧವ, ವಿಜಯ ಚವ್ಹಾಣ, ಪ್ರಭಾಕರ ರಾಠೋಡ, ಶ್ರೀಧರ ಚವ್ಹಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.