ADVERTISEMENT

‘ತೂರಿ ಬಂದ ಕಲ್ಲುಗಳಿಂದಲೇ ಅಕ್ಷರ ಸೃಷ್ಟಿಸಿದ ಸಾವಿತ್ರಿಬಾಯಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:39 IST
Last Updated 3 ಜನವರಿ 2021, 16:39 IST
ಕಲಬುರ್ಗಿಯ ಬಸವೇಶ್ವರ ಕಾಲೊನಿಯಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಶಹನಾಝ್ ಅಕ್ತರ್ ಮಾತನಾಡಿದರು. ಕೆ. ನೀಲಾ, ಪ್ರಿಯಾಂಕಾ ಮಾವಿನಕರ್, ಸ್ನೇಹಾ ಬೀದರ್ ಇದ್ದರು
ಕಲಬುರ್ಗಿಯ ಬಸವೇಶ್ವರ ಕಾಲೊನಿಯಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಶಹನಾಝ್ ಅಕ್ತರ್ ಮಾತನಾಡಿದರು. ಕೆ. ನೀಲಾ, ಪ್ರಿಯಾಂಕಾ ಮಾವಿನಕರ್, ಸ್ನೇಹಾ ಬೀದರ್ ಇದ್ದರು   

ಕಲಬುರ್ಗಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ತೂರಿ ಬಂದ ಕಲ್ಲುಗಳಿಂದಲೇ ಅಕ್ಷರದ ಇತಿಹಾಸ ಸೃಷ್ಟಿಸಿದರು. ಇನ್ನೋರ್ವ ಮಹಾನ್ ಶಿಕ್ಷಣ ಪ್ರೇಮಿ ಫಾತಿಮಾ ಶೇಖ್ ಅವರು ಆ ಅಕ್ಷರದ ಬೆಳಕನ್ನು ಮುಂದಕ್ಕೆ ಒಯ್ದರು ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ಕಾಲೊನಿಯಲ್ಲಿ ಭಾನುವಾರ ಸಾವಿತ್ರಿಬಾಯಿ ಫುಲೆ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿ ತಳಸಮುದಾಯಗಳ ಏಳಿಗೆಗಾಗಿ ಹಾಗೂ ಮಹಿಳೆಯರ ಸಮಾನತೆಗಾಗಿ, ಶಿಕ್ಷಣಕ್ಕಾಗಿ
ಹೋರಾಡಿದ ದಿಟ್ಟತನದ ಬಗ್ಗೆ ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ತಿಳಿಸಿದರು.

ADVERTISEMENT

‘ಬಂದ ಕಷ್ಟಗಳನ್ನೆಲ್ಲ ಧೈರ್ಯದಿಂದ ಎದುರಿಸಿ ಶಿಕ್ಷಣಕ್ಕೆ ಮಹತ್ವ ನೀಡಿದ ಅಕ್ಷರದ ಕ್ರಾಂತಿ ಸಾವಿತ್ರಿಬಾಯಿ ಪುಲೆ ಅವರ ಬದುಕು ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಬೇಕು’ ಎಂದರು.

ಕಾರ್ಯಕ್ರಮ ಆಯೋಜಿಸಿದ್ದ ಶಹನಾಝ್ ಅಕ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲವಿತ್ರ ವಸ್ತ್ರದ್ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಿಯಾಂಕಾ ಮಾವಿನಕರ್ ಸ್ವಾಗತಿಸಿದರು. ಸಾವಿತ್ರಿ ಬೀದರ, ಸ್ನೇಹಾ ಬೀದರ ಹಾಗೂ ಮಹಿಳಾ ಸಂಘಟನೆಯ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.