ADVERTISEMENT

ಬಿಟ್ಟಿ ಚಾಕರಿ; ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 15:48 IST
Last Updated 4 ಜುಲೈ 2021, 15:48 IST
ಕಲಬುರ್ಗಿಯಲ್ಲಿ ಭಾನುವಾರ ಜೀತ ಪದ್ಧತಿ ಹಾಗೂ ಬಿಟ್ಟಿ ಚಾಕರಿ ಬಗ್ಗೆ ನಡೆದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು
ಕಲಬುರ್ಗಿಯಲ್ಲಿ ಭಾನುವಾರ ಜೀತ ಪದ್ಧತಿ ಹಾಗೂ ಬಿಟ್ಟಿ ಚಾಕರಿ ಬಗ್ಗೆ ನಡೆದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು   

ಕಲಬುರ್ಗಿ: ‘ಜೀತ ಹಾಗೂ ಬಿಟ್ಟಿ ಚಾಕರಿಯಿಂದ ನರಳುತ್ತಿರುವ ಪರಿಶಿಷ್ಟರ ರಕ್ಷಣೆಗಾಗಿ ಜೀವಿಕ ಸಂಘಟನೆ ನಿರಂತರ ಕೆಲಸ ಮಾಡುತ್ತಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಬಿಟ್ಟಿ ಚಾಕರಿಯಲ್ಲಿ ಸಿಲುಕಿಕೊಂಡಿದ್ದ ಹಲವರನ್ನು ಪತ್ತೆ ಮಾಡಲಾಗಿದೆ’ ಎಂದು ಜೀವಿಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಡಾ.ಕಿರಣ ಪ್ರಸಾದ್‌ ಹೇಳಿದರು.

ಬಿಟ್ಟಿ ಚಾಕರಿ ಕುರಿತಂತೆ ನಗರದಲ್ಲಿ ಭಾನುವಾರ ನಡೆದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜೀತ ಪದ್ಧತಿಯ ಫಲಾನುಭವಿಗಳಿಗೆ ಸಿಗುವ ಎಲ್ಲ ಸೌಕರ್ಯಗಳೂ ಬಿಟ್ಟಿ ಚಾಕರಿ ಮಾಡುವವರಿಗೂ ಸಿಗಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮನವಿ ಕೂಡ ಸಲ್ಲಿಸಲಾಗಿದೆ’ ಎಂದರು.

ಡಿಎಂಎಸ್‍ಎಸ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ್ ತಾರಫೈಲ್‌ ಮಾತನಾಡಿ, ‘ಮನುಷ್ಯ ತನ್ನ ಕೆಲಸದಿಂದ ಶ್ರೇಷ್ಠ ಆಗುತ್ತಾನೆ ಹೊರತು; ಹುಟ್ಟಿನಿಂದ ಅಲ್ಲ. ಆರೋಗ್ಯಕರ ಸಮಾಜವನ್ನು ಕಟ್ಟಬೇಕಾದರೆ ಇಂಥ ಪದ್ಧತಿಗಳಿಂದ ಹೊರಬರಬೇಕ’ ಎಂದರು.

ADVERTISEMENT

ಡಿಎಂಎಸ್‍ಎಸ್‌ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ, ಜೀವಿಕ ಜಿಲ್ಲಾ ಉಸ್ತುವಾರಿ ಸಂಚಾಲಕ ಡಾ.ನಾರಾಯಣಸ್ವಾಮಿ, ಮುಖಂಡರಾದ ರವಿಕುಮಾರ್ ಕಲಬುರಗಿ, ಅಮರಾವತಿ, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.