ಕಾಳಗಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಅಶೋಕ ಲೇಲ್ಯಾಂಡ್ ಫೌಂಡೇಶನ್ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ತಾಲ್ಲೂಕಿನ ಕಲಗುರ್ತಿ ಗ್ರಾಮದಲ್ಲಿ ಈಚೆಗೆ ಶಾಲಾ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಯಿತು.
ಹೊಸ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಆರಂಭಿಸಲಾದ ಆಂದೋಲನದಲ್ಲಿ ಜಾಥಾದ ಮೂಲಕ ಜನತೆಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಯಿತು.
ಮುಖ್ಯಶಿಕ್ಷಕಿ ಅನಿತಾ, ಎಲ್.ಎಲ್.ಎಫ್ ಸಂಸ್ಥೆಯ ಕೋರವಾರ ಎಸ್.ಆರ್.ಪಿ ಅಂಬಿಕಾ, ಶಿಕ್ಷಕರಾದ ಶಿವಪುತ್ರ, ನಾಗೇಶ, ಗಂಗಮ್ಮ, ಎಸ್‌ಡಿಎಂಸಿ ಅಧ್ಯಕ್ಷ ದ್ಯಾವಣ್ಣಾ, ಭೀಮಶಾ, ಸಂಪನ್ಮೂಲ ಶಿಕ್ಷಕಿ ನಾಗವೇಣಿ, ಪುಷ್ಪಾವತಿ ಸೇರಿದಂತೆ ಮಕ್ಕಳು, ಪೋಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.