ADVERTISEMENT

ಸೇಡಂ | ಭಕ್ತರೇ ಮಠ-ಮಂದಿರಗಳ ಸಂಪತ್ತು: ಚನ್ನರುದ್ರಮುನಿ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:38 IST
Last Updated 5 ಮೇ 2025, 13:38 IST
ಸೇಡಂ ತಾಲ್ಲೂಕಿನ ಗುಂಡೇಪಲ್ಲಿ (ಕೆ) ಗ್ರಾಮದ ಸೋಮೇಶ್ವರ ಮಠದ ಆವರಣದಲ್ಲಿ ಗುರುಭವನ ನಿರ್ಮಾಣಕ್ಕೆ ಸೇಡಂನ ಶಿವಶಂಕರ ಶಿವಾಚಾರ್ಯರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು
ಸೇಡಂ ತಾಲ್ಲೂಕಿನ ಗುಂಡೇಪಲ್ಲಿ (ಕೆ) ಗ್ರಾಮದ ಸೋಮೇಶ್ವರ ಮಠದ ಆವರಣದಲ್ಲಿ ಗುರುಭವನ ನಿರ್ಮಾಣಕ್ಕೆ ಸೇಡಂನ ಶಿವಶಂಕರ ಶಿವಾಚಾರ್ಯರು ಭಾನುವಾರ ಭೂಮಿ ಪೂಜೆ ನೆರವೇರಿಸಿದರು   

ಸೇಡಂ: ‘ನೂರು ಎಕರೆ ಆಸ್ತಿ ಇದ್ದ ಮಾತ್ರಕ್ಕೆ ಮಠಗಳು ಬೆಳೆಯೋದಿಲ್ಲ, ಭಕ್ತರೆಂಬ ಸಂಪತ್ತು ಇದ್ದಾಗ ಮಾತ್ರ ಮಠ ಮಾನ್ಯಗಳು ಏಳಿಗೆಯಾಗಲು ಸಾಧ್ಯ’ ಎಂದು ಸೂಗೂರಿನ ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಚನ್ನರುದ್ರಮುನಿ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗುಂಡೇಪಲ್ಲಿ (ಕೆ) ಗ್ರಾಮದ ಶ್ರೀ ಸೋಮೇಶ್ವರ ಸಿದ್ಧಸಂಸ್ಥಾನ ಮಠದ ಆವರಣದಲ್ಲಿ ಗುರು ಭವನ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಯಾರಿಂದಲೂ ಯಾವುದೇ ಫಲಾಪೇಕ್ಷೆ ನಿರೀಕ್ಷೆ ಮಾಡುವವರಲ್ಲ. ಅಂದ ಮಾತ್ರಕ್ಕೆ ಭಕ್ತರೂ ಸುಮ್ಮನೆ ಕೂರುವುದಲ್ಲ. ಮಠದ ಬೆಳವಣಿಗೆಗೆ ಶ್ರಮಿಸುವ ಭಕ್ತರು ತಾವಾಗಬೇಕು’ ಎಂದರು.

ವೈದ್ಯ ಡಾ.ಶ್ರೀನಿವಾಸ ಮೊಕದಂ ಮಾತನಾಡಿ,‘ಈ ಭಾಗದಲ್ಲಿ ಯಾವುದೇ ಮಠ ಮಾನ್ಯಗಳು ಇರಲಿಲ್ಲ. ಅಂಥ ಸಂದರ್ಭದಲ್ಲಿ ಮಠದ ಶ್ರೀಗಳು ಬಂದು ನೆಲೆ ನಿಂತಿದ್ದಾರೆ. ಈ ಭಾಗದಲ್ಲಿ ಧರ್ಮದ ಜಾಗೃತಿಯ ಅವಶ್ಯಕತೆಯಿದೆ’ ಎಂದರು.

ADVERTISEMENT

ಸೇಡಂನ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು ಭೂಮಿ ಪೂಜೆ ನೆರವೇರಿಸಿದರು. ಮಠದ ಶಿವಸಿದ್ಧ ಸೊಮೇಶ್ವರ ಶಿವಾಚಾರ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನರ್, ಸದಾಶಿವರೆಡ್ಡಿ ಗೋಪನಪಲ್ಲಿ, ವೆಂಕಟರೆಡ್ಡಿ ಕಡತಾಲ, ಡಾ.ವೆಂಕಟರಾವ್ ಮಿಸ್ಕಿನ್, ನಾಗಪ್ಪ ಕೊಳ್ಳಿ, ಸುನಿತಾ ತಳವಾರ, ಶ್ರೀಕಾಂತರೆಡ್ಡಿ ಪಾಟೀಲ್, ಗೋವಿಂದ ಯಾಕಂಬ್ರಿ, ಅಶೋಕ ಕಡಚರ್ಲಾ, ಮಲ್ಲಿಕಾರ್ಜುನ ಮೆಕ್ಯಾನಿಕ್, ನಾಗೇಂದ್ರಪ್ಪ ಲಿಂಗಂಪಲ್ಲಿ, ಶೇಖರರೆಡ್ಡಿ ಗುಂಡೇಪಲ್ಲಿ, ಮೊಗಲಪ್ಪ ತಲಾರಿ, ಕಿಷ್ಟಪ್ಪ ಕಾವಲಿ, ನರಸಿಂಹರೆಡ್ಡಿ, ವಿಜಯಕುಮಾರ, ಕರಿಘೂಳಿ ಹಳಿಜೋಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.