ADVERTISEMENT

ಸೇಡಂ | ಹಿಂದೂ ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಿ: ತಹಶೀಲ್ದಾರ್ ಶ್ರೀಯಾಂಕ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:02 IST
Last Updated 30 ಜನವರಿ 2026, 6:02 IST
ಹಿಂದೂ ರುದ್ರಭೂಮಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರಿಗೆ ಮನವಿ ಸಲ್ಲಿಸಿದರು
ಹಿಂದೂ ರುದ್ರಭೂಮಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರಿಗೆ ಮನವಿ ಸಲ್ಲಿಸಿದರು   

ಸೇಡಂ: ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿ ಸಾರ್ವಜನಿಕ ಬಳಕೆಯಲ್ಲಿದೆ. ಆದರೆ, ರುದ್ರಭೂಮಿಯೂ ಮೂಲಸೌಲಭ್ಯಗಳಿಲ್ಲದೆ ದುಸ್ಥಿತಿಯಲ್ಲಿದೆ. ಅಂತ್ಯಕ್ರಿಯೆಗೆ ಸಾರ್ವಜನಿಕರು ತೆರಳಿದಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರುದ್ರಭೂಮಿಯಲ್ಲಿ ರಸ್ತೆ, 200 ಜನ ಕುಳಿತುಕೊಳ್ಳಲು ಶಡ್, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ನೀರಿನ ಸೌಕರ್ಯ, ಶವಸಂಸ್ಕಾರ ಸಾಮಾಗ್ರಿ ಇಡಲು ಕೊಠಡಿ, ಶಿವನ ದೇವಾಲಯ ನಿರ್ಮಾಣ ಹಾಗೂ ಅಂತ್ಯಕ್ರಿಯೆಯ ಅನುಕೂಲಕ್ಕಾಗಿ ಇಬ್ಬರು ಖಾಯಂ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅನಂತರೆಡ್ಡಿ ಪಾಟೀಲ, ಸಂತೋಷ ಕುಲಕರ್ಣಿ ಕಾರ್ಯದರ್ಶಿ, ಪದಾಧಿಕಾರಿಗಳಾದ ಅನೀಲ ಮಾಲಪಾಣಿ, ರಾಜಶೇಖರ ನೀಲಂಗಿ, ವೀರಭದ್ರಪ್ಪ ಟೆಂಗಳಿ, ಶಂಕರ ಸಜ್ಜನ, ಕೃಷ್ಣ ಐನಾಪುರ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.