ADVERTISEMENT

ನೆರೆಪೀಡಿತ ಗ್ರಾಮಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 3:01 IST
Last Updated 30 ಸೆಪ್ಟೆಂಬರ್ 2025, 3:01 IST
ಸೇಡಂ ತಾಲ್ಲೂಕು ಕುಕ್ಕುಂದಾ ಗ್ರಾಮಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಭೇಟಿ ನೀಡಿದರು
ಸೇಡಂ ತಾಲ್ಲೂಕು ಕುಕ್ಕುಂದಾ ಗ್ರಾಮಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಭೇಟಿ ನೀಡಿದರು   

ಸೇಡಂ: ಕಾಗಿಣಾ ನದಿ ನೀರಿನ ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಯಾದ ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಭೇಟಿ ನೀಡಿ ನೆರೆ ಸಂತ್ರಸ್ತರ ಆಹ್ವಾಲನ್ನು ಆಲಿಸಿದರು.

ತಾಲ್ಲೂಕಿನ ಮಳಖೇಡ, ಸಮಖೇಡ ತಾಂಡಾ, ಮಳಖೇಡದ ಕೋಲಿವಾಡ, ದರ್ಗಾ ಕಾಲೊನಿ, ಬೀರನಳ್ಳಿ, ಮೀನಹಾಬಾಳ, ಕುಕ್ಕುಂದಾ, ಯಡಗಾ, ತೆಲ್ಕೂರ ಮತ್ತು ಹಾಬಾಳ ಪ್ರದೇಶಗಳಿಗೆ ಭೇಟಿ ನೀಡಿದರು. ನೀರು ನುಗ್ಗಿ ಹಾನಿಗೊಳಗಾದ ಮನೆಗಳಿಗೆ ತೆರಳಿ ಪರಿಸಸ್ಥಿತಿ ಅವಲೋಕಿಸಿದರು.

‘ಮಳೆಯಿಂದ ಹಾನಿಯಾದ, ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ‌ ನೀಡಬೇಕು. ತಕ್ಷಣವೇ ವರದಿ ಸಲ್ಲಿಸಬೇಕು. ಸ್ಥಳೀಯವಾಗಿ ಇದ್ದು, ಜನರ ಕಷ್ಟಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸಿಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಶಿವಶರಣರೆಡ್ಡಿ ಪಾಟೀಲ, ರಾಜಶೇಖರ ಪುರಾಣಿಕ, ದಿನೇಶ ಪಾಟೀಲ, ನಾಗರಾಜ ನಂದೂರು, ಬಸವರಾಜ ರೇವಗೊಂಡ, ಮಹೇಶ ಪೂಜಾರಿ, ಶಿವಕುಮಾರ ದೇಶಮುಖ ಸೇರಿದಂತೆ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ತಾ.ಪಂ ಇ.ಒ ಚನ್ನಪ್ಪ ರಾಯಣ್ಣನವರ್, ಡಾ.ಸಂಜೀವಕುಮಾರ ಪಾಟೀಲ, ಮಾರುತಿ ಹುಜರಾತಿ, ವಿಶ್ವನಾಥ ಮಾವಿನಗಿಡ ಸೇರಿದಂತೆ ಇನ್ನಿತರರು ಇದ್ದರು.

ಸೇಡಂ ತಾಲ್ಲೂಕು ತೆಲ್ಕೂರ ಗ್ರಾಮದ ನೆರೆಪೀಡಿತ ಪ್ರದೇಶಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭಾನುವಾರ ಭೇಟಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.