ADVERTISEMENT

ಸೇಡಂ| ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯಲೋಪ: ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:09 IST
Last Updated 18 ಅಕ್ಟೋಬರ್ 2025, 7:09 IST
   

ಸೇಡಂ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯ ಲೋಪವೆಸಗಿರುವ ಕಾರಣಕ್ಕಾಗಿ ತಾಲ್ಲೂನ ಹೂಡಾ (ಎಂ) ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಹ್ಮದ ರಫೀಕ ಅವರನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಗುರುವಾರ ಆದೇಶಿಸಿದ್ದಾರೆ.

ಸದರಿ ಶಿಕ್ಷಕನನ್ನು ಸೋಮಪಲ್ಲಿ ಗ್ರಾಮಕ್ಕೆ ಸಮೀಕ್ಷೆ ಕೆಲಸಕ್ಕೆ ನಿಯೋಜಿಸಲಾಗತ್ತು, ಆದರೆ ಅವರು ವಹಿಸಿದ ಕೆಲಸದಲ್ಲಿ ಆಸಕ್ತಿ ತೋರದೆ, ಕಳೆದ ನಾಲ್ಕೆದು ದಿನಗಳಿಂದ ಗೈರಾಗಿದ್ದರು. ಮೇಲಧಿಕಾರಿಗಳು ಕರೆ ಮಾಡಿ ತಿಳಿಸಿದ ಮೇಲೂ ಸ್ಪಂದಿಸದೆ ಇರುವದರಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT