ADVERTISEMENT

ಸೇಡಂ: ಗಮನ ಸೆಳೆದ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 12:29 IST
Last Updated 25 ಮೇ 2025, 12:29 IST
ಸೇಡಂ ಪಟ್ಟಣದಲ್ಲಿ ಶನಿವಾರ ತಿರಂಗಯಾತ್ರೆ ನಡೆಯಿತು
ಸೇಡಂ ಪಟ್ಟಣದಲ್ಲಿ ಶನಿವಾರ ತಿರಂಗಯಾತ್ರೆ ನಡೆಯಿತು   

ಸೇಡಂ: ಭಾರತೀಯ ಸೈನಿಕರ ‘ಅಪರೇಷನ್ ಸಿಂಧೂರ’ ಯಶಸ್ವಿ ಕಾರ್ಯಾಚರಣೆಯ ನಿಮಿತ್ತ ಸೇಡಂನಲ್ಲಿ ತಿರಂಗಾ ಯಾತ್ರೆ ಶನಿವಾರ ನಡೆಯಿತು.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಧ್ವಜಯಾತ್ರೆಯೂ ಚೌರಸ್ತಾ, ಕಿರಾಣ ಬಜಾರ್, ತಾ.ಪಂ ಮುಖ್ಯರಸ್ತೆ ,ಬಸ್ ನಿಲ್ದಾಣದ ಮೂಲಕ ಬಸವೇಶ್ವರ ವೃತ್ತದವರೆಗೆ ಜರುಗಿತು. ತಿರಂಗಾ ಯಾತ್ರದ ಉದ್ದಕ್ಕೂ ಭಾರತೀಯ ಸೈನಿಕರ ಕಾರ್ಯಕ್ಕೆ ಜೈಘೋಷ ಕೂಗಲಾಯಿತು. ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಸಾರ್ವಜನಿಕರು ಕೈಯಲ್ಲಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯುದ್ದಕ್ಕೂ ಭಾಗವಹಿಸಿದರು. ಸುಮಾರು 1 ಕಿ.ಮೀ ದೂರದವರೆಗೆ ನಡೆದ ತಿರಂಗಾ ಧ್ವಜಯಾತ್ರೆಯಲ್ಲಿ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ವಕೀಲರ ಸಂಘ, ವ್ಯಾಪಾರಸ್ಥರ ಸಂಘ, ಕನ್ನಡಪದ ಸಂಘಟನೆಗಳು ಸೇರಿದಂತೆ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜೊತೆಗೆ ಮಹಿಳೆಯರು ಪಾಲ್ಗೊಂಡು ದೇಶಭಕ್ತಿಗೆ ಸಾಕ್ಷಿಯಾಗುವ ಮೂಲಕ ಗಮನ ಸೆಳೆದರು. ವಿವಿಧ ಮಠ-ಮಂದಿರಗಳ ಸ್ವಾಮೀಜಿಗಳು
ಭಾಗವಹಿಸಿದ್ದರು.

ದಿಗ್ಗಾಂವನ ಸಿದ್ದವೀರ ಶಿವಾಚಾರ್ಯ ಮಾತನಾಡಿ, ‘ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕಿದ್ದಾರೆ. ಭಾರತ ದೇಶ ಸೌಮ್ಯ ಮತ್ತು ಪ್ರೀತಿಯ ದೇಶ. ಎಲ್ಲರನ್ನೂ ಗೌರವಿಸಿ, ಪ್ರೀತಿಸುತ್ತೇವೆ. ಆದರೆ ನಮ್ಮ ದೇಶಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದೇವೆ. ಇಂತಹ ದೇಶಭಕ್ತಿಯ ಕಾರ್ಯ ಪ್ರತಿಯೊಬ್ಬರಲ್ಲಿ ಬರಬೇಕಿದೆ’ ಎಂದರು.

ADVERTISEMENT

ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಕರುಣೇಶ್ವರ ಶಿವಾಚಾರ್ಯ, ಅಭಿನವ ಗವಿಸಿದ್ದ
ಲಿಂಗೇಶ್ವರ ಶಿವಾಚಾರ್ಯ, ಕೇದಾರಲಿಂಗ ಸ್ವಾಮೀಜಿ, ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶಂಭು ಲಿಂಗೇಶ್ವರ ಸ್ವಾಮೀಜಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ರಾಜಶೇಖರ ನೀಲಂಗಿ, ಶಿವಲಿಂಗರೆಡ್ಡಿ ಪಾಟೀಲ, ಮನೋಹರ ದೊಂತಾ, ರಾಜಕುಮಾರ ಬಿರಾದಾರ, ಶಿವಕುಮಾರ ಪಾಟೀಲ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.