ADVERTISEMENT

ಗುಲಬರ್ಗಾ ವಿವಿ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 16:15 IST
Last Updated 25 ಫೆಬ್ರುವರಿ 2025, 16:15 IST
ಸೋಹಂ ಮತ್ತು ಪ್ರಜ್ವಲ್
ಸೋಹಂ ಮತ್ತು ಪ್ರಜ್ವಲ್   

ಕಲಬುರಗಿ: ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂಎಸ್ಐ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಸೋಹಂ ಮತ್ತು ಪ್ರಜ್ವಲ್‌ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಹ್ಯಾಂಡ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಫೆ.28ರಿಂದ ಮಾರ್ಚ್‌ 4ರವರೆಗೆ ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಟೂರ್ನಿಯಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಹೈ.ಕ. ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ. ಕೆ. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT