ADVERTISEMENT

ದೊಡ್ಡಪ್ಪ ಅಪ್ಪ ಶೈಕ್ಷಣಿಕ ಕ್ರಾಂತಿ ಸ್ಮರಣೀಯ: ಚನ್ನಾರೆಡ್ಡಿ ಪಾಟೀಲ

ವಿಚಾರಗೋಷ್ಠಿಯಲ್ಲಿ ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 16:01 IST
Last Updated 15 ಸೆಪ್ಟೆಂಬರ್ 2023, 16:01 IST
ಕಲಬುರಗಿ ನಗರದ ಜಸ್ಟಿಸ್ ಶಿವರಾಜ ಪಾಟೀಲ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಚಾರಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು
ಕಲಬುರಗಿ ನಗರದ ಜಸ್ಟಿಸ್ ಶಿವರಾಜ ಪಾಟೀಲ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಚಾರಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು   

ಕಲಬುರಗಿ: ‘ಶೈಕ್ಷಣಿಕ ಕ್ರಾಂತಿ ಮಾಡಿದ ದೊಡ್ಡಪ್ಪ ಅಪ್ಪ ಅವರು ನಿಜಕ್ಕೂ ಸ್ಮರಣೀಯರು. ಅಂಥವರ ತತ್ವಾದರ್ಶ ಅಳವಡಿಸಿಕೊಳ್ಳುವುದು ಅಗತ್ಯ’ ಎಂದು ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ ಹೇಳಿದರು.

ಹೈದರಾಬಾದ್ ಕರ್ನಾಟಕ ವಿಮೋಚನಾ ಸಪ್ತಾಹದ ಅಂಗವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಜಸ್ಟಿಸ್ ಶಿವರಾಜ ಪಾಟೀಲ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ‘ವಿಮೋಚನಾ ಹೋರಾಟಗಾರರ ಹೋರಾಟದ ಹಾದಿ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ,‘ಹೋರಾಟಗಾರರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದರು.

ಪತ್ರಕರ್ತ ಶಿವರಂಜನ ಸತ್ಯಂಪೇಟೆ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ ಅವರು ಪ್ರೇರಣೆಯಾಗಿದ್ದರು’ ಎಂದು ಹೇಳಿದರು.

ADVERTISEMENT

ರಜಾಕಾರರು ಮಹಾದಾಸೋಹ ಪೀಠದ ಮೇಲೆ ದಾಳಿ ನಡೆಸಿ ಕಳಸ, ನಂದಿ ವಿಗ್ರಹ ಹಾಗೂ ಮೂಲ ವಿಗ್ರಹಕ್ಕೆ ಧಕ್ಕೆ ತಂದಾಗ, ಆಗಿ ಹೋಗಿರುವುದಕ್ಕೆ ಚಿಂತಿಸಿ ಫಲವಿಲ್ಲ. ಎಲ್ಲರ ಭಕ್ತಿ ಒಂದೇ ಎಂದು ನಿಜಾಮ ಅರಸನಿಗೆ ಸನ್ಮಾನ ಮಾಡಿ ಕಳುಹಿಸಿದ ದೊಡ್ಡಪ್ಪ ಅಪ್ಪ ಅವರು ಸೌಹಾರ್ದ ಮೆರೆದಿದ್ದರು ಎಂದು ತಿಳಿಸಿದರು.

ದೊಡ್ಡಪ್ಪ ಅಪ್ಪ ಅವರು 1930ರಲ್ಲಿಯೇ ಶೈಕ್ಷಣಿಕ ಸಂಸ್ಥೆ ಆರಂಭಿಸಿ ಹೆಣ್ಣು ಮಕ್ಕಳ ಶಾಲೆ ತೆರೆದಿದ್ದರು ಎಂದು ಸ್ಮರಿಸಿದರು.

ಸುರೇಶ ಬಡಿಗೇರ, ಬಸವರಾಜ ಯಡ್ರಾಮಿ ಮಾತನಾಡಿದರು.

ಪ್ರಭುಗೌಡ ಪಾಟೀಲ, ಗೋಪಾಲ ನಾಟೀಕಾರ, ಮನೋಹರ ಬೀರನೂರ ಹಾಗೂ ಆನಂದ ಕಪನೂರ ಇದ್ದರು. ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.