ADVERTISEMENT

ಬಾಲಕಿ ಮೇಲೆ ಐವರು ಬಾಲಕರಿಂದ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 20:06 IST
Last Updated 10 ಜನವರಿ 2022, 20:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ನಗರದ ಕಾಲೊನಿಯೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಐವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ಜನವರಿ 5ರಂದು ನಡೆದಿದ್ದು, ಬಾಲಕಿಯ ಪಾಲಕರು ಸೋಮವಾರ ದೂರು ದಾಖಲಿಸಿದ್ದಾರೆ.

ಬಾಲಕಿ ಬುದ್ಧಿಮಾಂದ್ಯಳಾಗಿದ್ದರಿಂದ ವಿಷಯ ತಡವಾಗಿ ಗೊತ್ತಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತಮ್ಮ ಮನೆಯ ಹತ್ತಿರದಲ್ಲೇ ಇರುವ 15 ರಿಂದ 16 ವರ್ಷದ ಹುಡುಗರು ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ಪಾಲಕರು ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ಕೃತ್ಯ ಎಸಗಿದ ಬಾಲಕರೆಲ್ಲರೂ ಬಾಲಕಿಯ ಪಾಲಕರಿಗೆ ಪರಿಚಯಸ್ಥರು. ಹೀಗಾಗಿ, ಅವರನ್ನು ಸುಲಭವಾಗಿ ಪತ್ತೆ ಮಾಡಲಾಗಿದ್ದು, ಮಂಗಳವಾರ (ಜ. 11) ವಶಕ್ಕೆ ಪಡೆಯಲಾಗುವುದು’ ಎಂದುಸಿಪಿಐ ಶಿವಾನಂದ ಗಾಣಿಗೇರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.