ಚಿಂಚೋಳಿ: ತಾಲ್ಲೂಕಿನ ಶಾದಿಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದ್ದು ಕಾಂಗ್ರೆಸ್ ಬೆಂಬಲಿಗರಿಗೆ ಮುಖಭಂಗವಾಗಿದೆ.
ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಗೌತಮ ಪಾಟೀಲ ಸ್ಪರ್ಧೆಯಿಂದ ರಂಗುಪಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು 10 ಸ್ಥಾನಗಳಲ್ಲಿ ಜಯ ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿಗರು 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಗೌತಮ ಪಾಟೀಲ, ಶಂಕರ ಅಂಬ್ರು, ಶ್ರೀನಂದರೆಡ್ಡಿ ಪುರುಷೋತ್ತಮರೆಡ್ಡಿ, ಲಕ್ಷ್ಮೀಬಾಯಿ ಲಕಮು, ಮಧುಕರರಾವ್ ವೆಂಕಟರಾವ್, ಚಿನ್ನಪ್ಪ ಭೀಮಯ್ಯ, ಲೀಲಾಬಾಯಿ ವಿಠಲ, ಸೇವಂತಬಾಯಿ ಪ್ರೇಮ, ರಾಮಲು ಅಶೋಕ, ಸಾವಿತ್ರಿಬಾಯಿ ಬಾಬುರಾವ್, ಗೋಪಾಲ ಲೋಕು, ಝರಣಮ್ಮಬಕ್ಕಪ್ಪ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಿಂದ ಝರಣಮ್ಮ ಬಕ್ಕಪ್ಪ ಅವಿರೋಧವಾಗಿ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಗೆಲುವು ಸಾಧಿಸಿದ ಚಿನ್ನಪ್ಪ ಇಬ್ಬರು ಮಾತ್ರ ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ. ಉಳಿದವರೆಲ್ಲರೂ ಬಿಜೆಪಿ ಬೆಂಬಲಿಗರಾಗಿದ್ದಾರೆ.
ಚುನಾವಣೆ ಫಲಿತಾಂಶದ ನಂತರ ವಿಜೇತ ಅಭ್ಯರ್ಥಿಗಳು ಹಾಗೂ ಬಿಜೆಪಿ ಮುಖಂಡರು ಬೃಹತ್ ವಿಜಯೋತ್ಸವ ಆಚರಿಸಿದರು. ಗೌತಮ ಪಾಟೀಲ 256 ಅತ್ಯಧಿಕ ಮತ ಪಡೆದರೆ, ಸಾವಿತ್ರಿಬಾಯಿ ಬಾಬುರಾವ್ 253 ಎರಡನೇ ಅತ್ಯಧಿಕ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಗೌತಮ ಪಾಟೀಲ, ಅಶೋಕ ಮೊಗದಂಪುರ, ಉಮಾಪತಿ, ಗೋಪಾಲರಾವ್ ಕಟ್ಟಿಮನಿ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಅಶೋಕ ಚವ್ಹಾಣ, ಗೋಪಾಲರೆಡ್ಡಿ ಕೊಳ್ಳೂರು, ರಮೇಶ ಸಂಕಟಿ, ಗೋಪಾಲ ಬ್ಯಾಗೇರಿ, ರಾಮಲು,ದೀಪಕ ಪಾಟೀಲ, ರಿಯಾಜ್, ತುಕಾರಾಮ, ಆಕಾಶ ಕೊಳ್ಳೂರು, ಸಂಜೀವ ಪವಾರ ಸೇರಿದಂತೆ ನೂರಾರು ಜನ ವಿಜೇತರ ಬೆಂಬಲಿಗರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.