ADVERTISEMENT

ಕಲಬುರ್ಗಿ: ಶಾಂತಲಿಂಗೇಶ್ವರ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 14:10 IST
Last Updated 15 ಸೆಪ್ಟೆಂಬರ್ 2021, 14:10 IST
ಆಳಂದ ತಾಲ್ಲೂಕಿನ ಅಳಂಗಾ ಗ್ರಾಮದಲ್ಲಿ ಶಾಂತಲಿಂಗೇಶ್ವರರ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ಜರುಗಿತು
ಆಳಂದ ತಾಲ್ಲೂಕಿನ ಅಳಂಗಾ ಗ್ರಾಮದಲ್ಲಿ ಶಾಂತಲಿಂಗೇಶ್ವರರ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ಜರುಗಿತು   

ಆಳಂದ: ತಾಲ್ಲೂಕಿನ ಅಳಂಗಾ ಗ್ರಾಮದಲ್ಲಿ ಶ್ರಾವಣ ಮಾಸದ ಸಮಾಪ್ತಿ ನಿಮಿತ್ತ ಶಾಂತಲಿಂಗೇಶ್ವರರ ಪಲ್ಲಕ್ಕಿ ಹಾಗೂ ನಂದಿಕೋಲ ಮೆರವಣಿಗೆಯು ಸಂಭ್ರಮದಿಂದ ಜರುಗಿತು.

ಗ್ರಾಮದ ಮುಖ್ಯಬೀದಿಗಳಲ್ಲಿ ಕಡಗಂಚಿಯ ವೀರಭದ್ರ ಸ್ವಾಮೀಜಿ ಅವರ ಪಲ್ಲಕ್ಕಿ ಉತ್ಸವವು ನಡೆಯಿತು. ಭಜನೆ, ಡೊಳ್ಳುಕುಣಿತ ಹಾಗೂ ಭಕ್ತರ ಜಯಘೋಷಗಳು ಸಂಭ್ರಮಕ್ಕೆ ಮೆರುಗು ತಂದವು. ನಂದಿಕೋಲ ಮೆರವಣಿಗೆ ಹಾಗೂ ಧ್ವಜಾರೋಹಣ ಕಾರ್ಯಕ್ರಮವು ಜರುಗಿತು. ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಪಂಪಾಪತಿ ಸ್ವಾಮೀಜಿ ಗ್ರಾಮದ ಪ್ರಮುಖರಾದ ಶಿವಲಿಂಗಪ್ಪ ಕಿಣಗೆ, ಅಶೋಕ ಕಲಶೆಟ್ಟಿ, ಮಾಣಿಕ ಗೌಡೆ, ಶಿವಯ್ಯ ಸ್ವಾಮಿ, ಬಾಲಾಜಿ ಜಮದಾರ, ಚಂದು ಗೌಡೆ, ಪ್ರವೀಣ ಕಲಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT