
ವಾಡಿ: ‘ನಡೆ–ನುಡಿಗಳಲ್ಲಿ ಒಂದಾದ ಕಾರಣಕ್ಕಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದ ಶರಣರು, ಸಂತರ ಜೀವನ ಮತ್ತು ತತ್ವಗಳು ಇಂದು ನಮ್ಮ ಬದುಕಿಗೆ ಮಾರ್ಗದರ್ಶನ’ ಎಂದು ಮಳಖೇಡ ದರ್ಗಾದ ಹಜರತ್ ಸೈಯ್ಯದ್ ಶಹಾ ಮುಸ್ತಾಫಾ ಖಾದ್ರಿ ಸಜ್ಜದ್ ನಶೀನ್ ಹೇಳಿದರು.
ಪಟ್ಟಣ ಸಮೀಪದ ಹಲಕರ್ಟಿ ಕಟ್ಟಿಮನಿ ಹಿರೇಮಠದಲ್ಲಿ ಸೋಮವಾರ ಮುನೀಂದ್ರ ಮಹಾಶಿವಯೋಗಿ ಅವರ 43ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಜರುಗುತ್ತಿರುವ ಸೋಲಾಪುರದ ಸಿದ್ದರಾಮೇಶ್ವರರ ಮಹಾಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ಒದ್ದಾಡುತ್ತಿರುವ ನಮಗೆ ಶರಣರ ಸರಳ ಮತ್ತು ನಿಸ್ವಾರ್ಥ ಜೀವನ ಮಾದರಿಯಾಗಬೇಕಿದೆ. ಮುನೀಂದ್ರ ಶಿವಾಚಾರ್ಯರು ಶರಣರ ವಿಚಾರಗಳನ್ನು ಜನರಿಗೆ ಮುಟ್ಟಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದರು.
ಕಟ್ಟಿಮನಿ ಹಿರೇಮಠದ ಪ್ರಸ್ತುತ ಪೀಠಾಧಿಪತಿ ಮುನೀಂದ್ರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು.
ಸೋಲ್ಲಾಪುರದ ಸಿದ್ಧರಾಮೇಶ್ವರರ ಮಹಾಪುರಾಣವನ್ನು ಸಂಗೀತ ಕಲಾವಿದರಾದ ಅಮರೇಶ್ವರ ಶಾಸ್ತ್ರಿಗಳು ಯರಡೋಣಿ ಗವಾಯಿಗಳು ಪುರಾಣ ನಡೆಸಿಕೊಟ್ಟರು. ವೀರಭದ್ರಯ್ಯ ಸ್ವಾಮಿ ಕಟ್ಟಿಸಂಗಾವಿ, ವೀರೇಶ ಕಟ್ಟಿಸಂಗಾವಿ, ಮಲ್ಲಿಕಾರ್ಜುನ ಭಜಂತ್ರಿ ಸಂಗೀತ ಸೇವೆ ನೀಡಿದರು. ಸಿದ್ದಯ್ಯ ನಂದಿಕೋಲ ರಾವೂರು ಕುಟುಂಬದಿಂದ ಮುನೀಂದ್ರ ಶಿವಾಚಾರ್ಯರ ನಾಣ್ಯಗಳ ತುಲಾಭಾರ ನಡೆಯಿತು.
ಸುಭಾಷ್ ಸಾಹು ಚಂದನಕೇರಿ, ಈರಣ್ಣ ವಗ್ಗರ, ವಿಶ್ವನಾಥ ಗಂಧಿ, ಸಿದ್ದಯ್ಯಶಾಸ್ತ್ರಿ ನಂದೂರ ಮಠ, ಶರಣು ಬೊಮ್ಮನಹಳ್ಳಿ, ಮರಲಿಂಗಪ್ಪ ಚಟ್ನಳ್ಳಿ, ದೊಡ್ಡಪ್ಪಗೌಡ ಪೊಲೀಸ್ ಪಾಟೀಲ್, ಸೋಮಶೇಖರ ಹಲಕರ್ಟಿ, ಶಾಂತಕುಮಾರ ಎಣ್ಣಿ, ಮಹಾಂತಸ್ವಾಮಿ ಮಠಪತಿ, ಮಲ್ಲಿಕಾರ್ಜುನ ಕಟ್ಟಿಮನಿ, ಪ್ರಕಾಶ ಚಂದನಕೇರಿ, ಗೊರೇಖ್ ಪಾಷಾ ಪಟೇಲ್, ರವಿಕುಮಾರ ಕಮರಡಗಿ, ರವಿ ಸಿಂದಗಿ, ಶರಣಪ್ಪ ಹಿಟ್ಟಿನ್, ಸಾಬಣ್ಣ ಮುಸಲಾ, ಗುರುನಾಥ ಮಣಿಗಿರಿ, ದೇವಿಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.