ADVERTISEMENT

ಪಾಳಾ: ಅದ್ದೂರಿ ಶರಣಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 14:31 IST
Last Updated 17 ಏಪ್ರಿಲ್ 2022, 14:31 IST
ಕಲಬುರಗಿ ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಶರಣಬಸವೇಶ್ವರರ ರಥೋತ್ಸವ ಜರುಗಿತು
ಕಲಬುರಗಿ ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಶರಣಬಸವೇಶ್ವರರ ರಥೋತ್ಸವ ಜರುಗಿತು   

ಕಲಬುರಗಿ: ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಶರಣಬಸವೇಶ್ವರರ 4ನೇ ಜಾತ್ರಾ ಮಹೋತ್ಸವದ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಮಳೇಂದ್ರ ಶಿವಾಚಾರ್ಯ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು ಪಾಳಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ರಥದಲ್ಲಿ ಶರಣಬಸವೇಶ್ವರರ ಮೂರ್ತಿ ಇರಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಹಾಕಿದರು. ಮಕ್ಕಳು, ವೃದ್ಧರು, ಮಹಿಳೆಯರು ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ 3ರಿಂದ ಜಮಾಯಿಸಿದ್ದರು. ಸಂಜೆ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡು, ರಥಕ್ಕೆ ಹಣ್ಣು, ಬಾಳೆ ಹಣ್ಣು, ಫಲಪುಷ್ಪ ಸಮರ್ಪಿಸಿದರು.

ADVERTISEMENT

ರಥೋತ್ಸವ ವೇಳೆ ಕಳಸ, ಡೊಳ್ಳು ಕುಣಿತ, ವಾದ್ಯಗಳು, ನಂದಿಕೋಲು, ಅಕ್ಕಮಹಾದೇವಿ ಭಜನಾ ಮಂಡಳಿ ಸಮೇತ ಮೆರವಣಿಗೆ ನಡೆಯಿತು.

ಶರಣಗೌಡ ಪಾಟೀಲ, ಸಂತೋಷ ಬಿ.ಪಾಟೀಲ ಪಾಳಾ, ಸುಪ್ರೀತ್ ಚವಣ, ಸಂಗಮೇಶ ರಜೋಳ ಪಾಳಾ ನೇತೃತ್ವದ ವಹಿಸಿದ್ದರು. ಬಾಪೂಗೌಡ ಪಾಟೀಲ, ಬಸವರಾಜ ಗೌನಳ್ಳಿ, ಶಾಂತು, ಶರಣು, ಕರುಣಯ್ಯ ಸ್ವಾಮಿ, ಚಂದಯ್ಯ ಗುತ್ತೇದಾರ, ವಿಶ್ವನಾಥ ಸಾವಕಾರ, ಖೇಮಲಿಂಗ ಬಸಯ್ಯ ಸ್ವಾಮಿ, ನಾಗಯ್ಯ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.