ADVERTISEMENT

ಶಿವಾಜಿ ಜಯಂತಿಯ ಮೈಕ್ ಶಬ್ದಕ್ಕೆ ತಕರಾರು: ಗುಂಪು ಘರ್ಷಣೆ

ಸ್ಥಳಕ್ಕೆ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಭೇಟಿ: ಶಾಂತಿ ಕಾಪಾಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:17 IST
Last Updated 22 ಫೆಬ್ರುವರಿ 2026, 0:17 IST
ಕಲಬುರಗಿ ಜಿಲ್ಲೆಯ ರಾವೂರು ಗ್ರಾಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಸಿದ್ದಬಸವನಗೌಡ, ಪಿಎಸ್ಐ ತಿರುಮಲೇಶ ಕೆ. ಹಾಗೂ ಸ್ಥಳೀಯರು ಇದ್ದರು
ಕಲಬುರಗಿ ಜಿಲ್ಲೆಯ ರಾವೂರು ಗ್ರಾಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಸಿದ್ದಬಸವನಗೌಡ, ಪಿಎಸ್ಐ ತಿರುಮಲೇಶ ಕೆ. ಹಾಗೂ ಸ್ಥಳೀಯರು ಇದ್ದರು   

ವಾಡಿ (ಕಲಬುರಗಿ ಜಿಲ್ಲೆ): ಶಿವಾಜಿ ಜಯಂತಿಯಂದು ಮೈಕ್ ಶಬ್ದಕ್ಕೆ ಸಂಬಂಧಿಸಿ ಗುರುವಾರ ರಾತ್ರಿ ರಾವೂರು ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಗುಂಪುಗಳ ನಡುವೆ ಚಕಮಕಿ ಉಂಟಾಗಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲ್ಲುತೂರಾಟ ನಡೆದು 5ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಶನಿವಾರ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ರಾವೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೊಂದಿಗೆ ಚರ್ಚಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಗೋಕುಲ ನಗರದ ಗಣೇಶ ಕಟ್ಟೆಯ ಬಳಿ ಗುರುವಾರ ರಾತ್ರಿ ಶಿವಾಜಿ ಜಯಂತಿಯಂದು ನಡೆಯುತ್ತಿದ್ದ ಮೆರವಣಿಗೆಯಲ್ಲಿ ಮೈಕ್ ಶಬ್ದ ಕಡಿಮೆ ಮಾಡುವ ವಿಷಯಕ್ಕೆ ಕೆಲ ಮುಸ್ಲಿಂ ಹಾಗೂ ಹಿಂದೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ನೂಕಾಟ–ತಳ್ಳಾಟ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ADVERTISEMENT

ಘಟನೆಯಲ್ಲಿ 5 ಜನರು ಗಾಯಗೊಂಡರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಾಡಿ ಪಿಎಸ್ಐ ತಿರುಮಲೇಶ ಕೆ. ಪರಿಸ್ಥಿತಿ ತಿಳಿಗೊಳಿಸಿದರು. ಈ ಕುರಿತು ವಾಡಿ ಠಾಣೆಯಲ್ಲಿ ಮುಂಜಾಗ್ರತೆಯಾಗಿ ಎರಡು ಕೋಮಿನ 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗ್ರಾಮದಲ್ಲಿ ಈಗ ಹೆಚ್ಚಿನ ಪೊಲೀಸರು ಬೀಡು ಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.