ADVERTISEMENT

ಸಸಿನೆಟ್ಟು ಶ್ರೀಗಳ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:00 IST
Last Updated 2 ಏಪ್ರಿಲ್ 2022, 2:00 IST
ಚಿಂಚೋಳಿ ತಾಲ್ಲೂಕು ಕೊಳ್ಳೂರು ಗ್ರಾಮದ ಪಾರ್ವತಿ ಪರಮೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಸಸಿ ನೆಟ್ಟು ಸಿದ್ದಗಂಗಾಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನ ಆಚರಿಸಲಾಯಿತು
ಚಿಂಚೋಳಿ ತಾಲ್ಲೂಕು ಕೊಳ್ಳೂರು ಗ್ರಾಮದ ಪಾರ್ವತಿ ಪರಮೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಸಸಿ ನೆಟ್ಟು ಸಿದ್ದಗಂಗಾಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನ ಆಚರಿಸಲಾಯಿತು   

ಚಿಂಚೋಳಿ: ತಾಲ್ಲೂಕಿನ ಕೊಳ್ಳೂರು ಗ್ರಾಮದ ಪಾರ್ವತಿ ಪರಮೇಶ್ವರ ದೇವಾಲಯದಲ್ಲಿ ಶುಕ್ರವಾರ ಲಿಂ. ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನವನ್ನು ಅನ್ನ ದಾಸೋಹ ಮತ್ತು ಸಸಿ ನೆಟ್ಟು ಆಚರಿಸಲಾಯಿತು.

ಮಠದ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪಾಲಕರು ಮತ್ತು ಮಕ್ಕಳು ಸಸಿಗಳನ್ನು ನೆಟ್ಟು ಸ್ವಾಮೀಜಿಳನ್ನು ಸ್ಮರಿಸಿದರು.

ನೂರಾರು ಭಕ್ತರಿಗೆ ಹುಗ್ಗಿ, ಅನ್ನ, ಸಾಂಬರು ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ನಿವೃತ್ತ ಮುಖ್ಯಶಿಕ್ಷಕ ಜಗದೀಶ್ವರ ತಾದಲಾಪುರ, ಶಿವಪ್ರಸಾದ ಪಿಜಿ, ರಾಜಶೇಖರ ಕೊಳ್ಳೂರು, ಗೋಪಾಲರೆಡ್ಡಿ ಗೋವಿಂದನೋರ, ರೇವಣಸಿದ್ದಯ್ಯ ಹಿರೇಮಠ, ಭೀಮರೆಡ್ಡಿ ಯಂಗಮ್, ಶಿವಕುಮಾರ ಪವಾಡಶೆಟ್ಟಿ, ಶಶಿಧರ ಹೊಕ್ರಾಣಿ, ವಿಜಯಕುಮಾರ ಚಂಡ್ರಾಸಿ, ಜಗನ್ನಾಥ ಶೇರಿಕಾರ, ಬಸವರಾಜ ಹುಗ್ಗೆಳ್ಳಿ, ಬಸವರಾಜ ಕಲಾಲ್, ವೆಂಕಟೇಶ ಗೊಟ್ಟಂಗೊಟ್ಟಿ, ರಾಜಕುಮಾರ, ಬಸವರಾಜ ಹೊಕ್ರಾಣಿ ಕಿಶನರೆಡ್ಡಿ ಪರಸಾಣಿ, ರಾಜಶೇಖರ ಪವಾಡಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.