ADVERTISEMENT

ಕಲಬುರಗಿ: ‘ನಿಯಮ ಮೀರಿ ಕಸಾಪ ತಾಲ್ಲೂಕು ಅಧ್ಯಕ್ಷರ ನೇಮಕ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 5:14 IST
Last Updated 27 ಡಿಸೆಂಬರ್ 2021, 5:14 IST
ವೀರಭದ್ರ ಸಿಂಪಿ
ವೀರಭದ್ರ ಸಿಂಪಿ   

ಕಲಬುರಗಿ: ಇತ್ತೀಚೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು ನಿಯಮಾವಳಿಗಳನ್ನು ಮೀರಿ, ತಾಲ್ಲೂಕು ಸದಸ್ಯರ ಅಭಿಪ್ರಾಯ ‍ಪಡೆಯದೇ ಸರ್ವಾಧಿಕಾರಿಯಂತೆ ತಾಲ್ಲೂಕು ಅಧ್ಯಕ್ಷರ ನೇಮಕ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಸದಸ್ಯರ ಸಲಹೆ ಪಡೆದು ನೇಮಕ ಮಾಡಬೇಕು’ ಎಂದು ಒತ್ತಾಯಿಸಿ ವೀರಭದ್ರ ಸಿಂಪಿ ಅವರು ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ.

ಪರಿಷತ್ತಿನ ನಿಬಂಧನೆ 15ರಂತೆ ಆಯಾ ತಾಲ್ಲೂಕಿನ ಸದಸ್ಯರೊಂದಿಗೆ ಸಮಾಲೋಚನೆ ನಡೆಸಬೇಕು. ಆದರೆ, ಅಧ್ಯಕ್ಷರು ಕಲಬುರಗಿಯಲ್ಲೇ ಕುಳಿತು, ತಾಲ್ಲೂಕು ಸದಸ್ಯರ ಅಭಿಪ್ರಾಯ ಪಡೆಯದೇ ಸದಸ್ಯರನ್ನು ನೇಮಕ ಮಾಡಿರುವುದು ಪರಿಷತ್ತಿನ ನಿಯಮಗಳ ಉಲ್ಲಂಘನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಿಯಮ 14 (ಈ) ಪ್ರಕಾರ ಪರಿಷತ್ತಿನ ಕೇಂದ್ರ ಅಧ್ಯಕ್ಷರ ಅನು ಮೋದನೆ ಪಡೆದು ಪಟ್ಟಿ ಪ್ರಕಟಿಸಬೇಕು. ಇದನ್ನು ಉಲ್ಲಂಘಿಸಿ ಪಟ್ಟಿ ಪ್ರಕಟಿಸಿದ್ದಾರೆ. ಇದರಿಂದ ಪರಿಷತ್ತಿನ ಸಂಪ್ರದಾಯ, ಘನತೆ, ಗೌರವಗಳಿಗೆ ಧಕ್ಕೆಯುಂಟು ಮಾಡಿದಂತಾಗಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.