
ಚಿಂಚೋಳಿ: ತಾಲ್ಲೂಕಿನ ಐನಾಪುರ ಮತ್ತು ರಟಕಲ್ ವಿದ್ಯುತ್ ಉಪ ಕೇಂದ್ರದ ವ್ಯಾಪ್ತಿಯಲ್ಲಿರುವ ಚಂದನಕೇರಾ, ಗಡಿಲಿಂಗದಳ್ಳಿ, ಐನಾಪುರ, ಮತ್ತು ಸಲಗರ ಬಸಂತಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಹಾಗೂ ತಾಂಡಾಗಳ ರೈತರು ತಮ್ಮ ತೋಟದಲ್ಲಿ ನಿರ್ಮಿಸಿಕೊಂಡ ಮನೆಗಳಿಗೆ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಪ್ರಾರಂಭಿಸಲಾಗಿದೆ ಎಂದು ಶಾಖಾಧಿಕಾರಿ ಸೂರ್ಯಕಾಂತ ಕಿರುಸಾವಳಗಿ ತಿಳಿಸಿದ್ದಾರೆ.
ಐನಾಪುರ ಉಪ ಕೇಂದ್ರದಲ್ಲಿರುವ ವಿವಿಧ ಪಂಚಾಯಿತಿಗಳಿಗೆ ತೆರಳುವ ಫೀಡರ್ ಮತ್ತು ರಟಕಲ್ ಉಪ ಕೇಂದ್ರದ ಚಂದನಕೇರಾ ಫೀಡರ್‌ಗೆ ಪೂಜೆ ಸಲ್ಲಿಸಿ ವಿದ್ಯುತ್ ಪೂರೈಕೆಗೆ ಚಾಲನೆ ನೀಡಲಾಯಿತು. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಶಬ್ಬೀರಮಿಯಾಮ ವಿಶ್ವನಾಥ, ಸಿದ್ದು, ಬಸವರಾಜ ಮೊದಲಾದವರು ಇದ್ದರು.
ಐನಾಪುರ, ರಟಕಲ್‌ನ ಉಪ ಕೇಂದ್ರ ವ್ಯಾಪ್ತಿಯ ಗ್ರಾಮಗಳಿಗೆ ರಾತ್ರಿ ಸಮಯದಲ್ಲಿ ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಪ್ರಾರಂಭಿಸುವ ಮೂಲಕ ಇಡೀ ತಾಲ್ಲೂಕಿನ ತುಂಬಾ ಸಿಂಗಲ್ ಫೇಸ್ ವಿದ್ಯುತ್ ರಾತ್ರಿ ಒದಗಿಸಿದಂತಾಗಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾಮಣ್ಣ ಇಂಜಳ್ಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.