ADVERTISEMENT

ಕಾಳಗಿ: ಸೋಲಾಪುರ ಸಿದ್ದರಾಮೇಶ್ವರ ಪುರಾಣ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 7:00 IST
Last Updated 1 ಆಗಸ್ಟ್ 2025, 7:00 IST
ಕಾಳಗಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸೋಲಾಪುರ ಸಿದ್ದರಾಮೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಕಾಳಗಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸೋಲಾಪುರ ಸಿದ್ದರಾಮೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಕಾಳಗಿ: ತಾಲ್ಲೂಕಿನ ಗಡಿಕೇಶ್ವರ ಗ್ರಾಮದ ಆರಾಧ್ಯದೈವ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ನೂತನ ಶಿಖರದ ಕಳಸಾರೋಹಣ ಮತ್ತು ಶ್ರಾವಣ ಮಾಸದ ಅಂಗವಾಗಿ ಸೋಲಾಪುರ ಸಿದ್ದರಾಮೇಶ್ವರ ಮಹಾಪುರಾಣ ಕಾರ್ಯಕ್ರಮಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಜಶೇಖರ ನಿಲಂಗಿ ಮತ್ತು ಶರಣು ಮೋತಕಪಲ್ಲಿ ಉದ್ಘಾಟಿಸಿದರು. ಭರತನೂರ ವಿರಕ್ತಮಠದ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ರಾಯಕೋಡ ಕಟ್ಟಿಮಠದ ಚಿಕ್ಕ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಸೇಡಂ ಗೌರವಾಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಚಿಂಚೋಳಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಲಾಮೂರ ಮಾತನಾಡಿದರು. ಚಿಂಚೋಳಿ ವೀರಶೈವ ಸಮಾಜದ ಅಧ್ಯಕ್ಷ ಸಂಜುಕುಮಾರ ಪಾಟೀಲ್, ವೀರೇಶ ಯಂಪಳ್ಳಿ, ಶಿವರಾಜ ವಾಲಿ ಅನೇಕರು ಇದ್ದರು.

ADVERTISEMENT

ಚಿಮ್ಮಾ ಇದ್ಲಾಯಿ ಹಿರೇಮಠದ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಪುರಾಣ ಹೇಳಿದರು. ಆ.22ರವರೆಗೆ ಪ್ರತಿರಾತ್ರಿ 8ಕ್ಕೆ ಪುರಾಣ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.