ADVERTISEMENT

ಸೊನ್ನ ಗ್ರಾಮ ಸ್ಥಳಾಂತರಕ್ಕೆ ಕ್ರಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 3:18 IST
Last Updated 19 ಅಕ್ಟೋಬರ್ 2020, 3:18 IST
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮವನ್ನು ಸ್ಥಳಾಂತರ ಮಾಡುವ ಕುರಿತು ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಭಾನುವಾರ ಮಾತನಾಡಿದರು
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮವನ್ನು ಸ್ಥಳಾಂತರ ಮಾಡುವ ಕುರಿತು ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಭಾನುವಾರ ಮಾತನಾಡಿದರು   

ಅಫಜಲಪುರ: ಸೊನ್ನ ಗ್ರಾಮವನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವುದಾಗಿ ವಿ.ವಿ.ಜ್ಯೋತ್ನ್ಸಾ ಗ್ರಾಮಸ್ಥರಿಗೆ ಭರವಸೆ ನೀಡಿದರು.

ತಾಲ್ಲೂಕಿನ ಸೊನ್ನ ಗ್ರಾಮದ ಭೀಮಾ ಬ್ಯಾರೇಜ್‌ಗೆ ಭಾನುವಾರ ಭೇಟಿ ನೀಡಿದ ಅವರು, ನಂತರ ಸೊನ್ನ ಗ್ರಾಮಸ್ಥರ ಬೇಡಿಕೆಯನ್ನು ಆಲಿಸಿದರು.

ಗ್ರಾಮದ ಮುಖಂಡರಾದ ಮಹಾರಾಯ ಅಗಸಿ ಮಾತನಾಡಿ, ‘ನಮ್ಮನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು. ಈಗಾಗಲೇ ಹೊಸ ಬಡಾವಣೆ ಮಾಡಲಾಗಿದೆ. ಆದರೆ ಅಲ್ಲಿ ಮನೆ ಕಟ್ಟಲು ನಿವೇಶನ ಮಾಡಿಲ್ಲ. ಹೇಗಾದರೂ ಮಾಡಿ ಸೊನ್ನ ಗ್ರಾಮವನ್ನು ಸ್ಥಳಾಂತರ ಮಾಡಬೇಕು’ ಎಂದು ಕೇಳಿಕೊಂಡರು.

ADVERTISEMENT

‘ಪರಿಹಾರ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಸಣ್ಣ ಮಕ್ಕಳಿಗೆ ಹಾಲು, ಬಿಸ್ಕೆಟ್ ನೀಡಬೇಕು. ಪಾಲಕರೇ ಹಣ ಕೊಟ್ಟು ತರಬೇಕೆಂದರೆ ಪರಿಹಾರ ಕೇಂದ್ರದಿಂದ ದೂರ ಹೋಗಬೇಕಾಗುತ್ತದೆ’ ಎಂದು ಸಂತ್ರಸ್ತರು ಹೇಳಿದಾಗ ‘ನಾಳೆಯಿಂದಲೇ ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಬಿಸ್ಕೆಟ್, ಹಾಲು ವಿತರಣೆ ಮಾಡಲಾಗುತ್ತದೆ’ ಎಂದರು.

ಜಿ.ಪಂ ಸಿಇಒ ಪಿ.ರಾಜಾ, ತಹಶೀಲ್ದಾರ್‌ ಬಸಲಿಂಗಪ್ಪ ಬಿರಾದಾರ, ಕಾರ್ಯಪಾಲಕ ಎಂಜಿನಿಯರ್ ಅಶೋಕ ಕಲಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.