ಕಲಬುರ್ಗಿ: ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಡಿ 5ರಂದು ಮಧ್ಯ ರೈಲ್ವೆಯು ಕಲಬುರ್ಗಿಯಿಂದ ಮುಂಬೈಗೆ ವಿಶೇಷ ರೈಲನ್ನು (01319–01320) ಓಡಿಸಲಿದೆ.
ಡಿ 5ರಂದು ರಾತ್ರಿ 8.40ಕ್ಕೆ ನಗರದಿಂದ ಹೊರಡುವ ರೈಲು ಸೊಲ್ಲಾಪುರ, ಕುರ್ದವಾಡಿ, ದೌಂಡ್, ಪುಣೆ, ಲೋನಾವಳಾ, ಕರ್ಜತ್, ಕಲ್ಯಾಣ್, ದಾದರ್ ಮೂಲಕ ಡಿ 6ರಂದು ಬೆಳಿಗ್ಗೆ 8.20ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ತಲುಪಲಿದೆ.
ಡಿಸೆಂಬರ್ 7ರಂದು ರಾತ್ರಿ 12.25ಕ್ಕೆ ಮುಂಬೈನಿಂದ ಹೊರಡುವ ರೈಲು ಅದೇ ದಿನ ಮಧ್ಯಾಹ್ನ 1.40ಕ್ಕೆ ಕಲಬುರ್ಗಿ ತಲುಪಲಿದೆ.
ಸೊಲ್ಲಾಪುರದಿಂದ ಡಿ 5ರಂದು ರಾತ್ರಿ 9.30ಕ್ಕೆ ಹೊರಡುವ ವಿಶೇಷ ರೈಲು (01315–01316) ಡಿ 6ರಂದು ಬೆಳಿಗ್ಗೆ 8.20ಕ್ಕೆ ಮುಂಬೈ ತಲುಪಲಿದೆ. ಡಿಸೆಂಬರ್ 7ರ ರಾತ್ರಿ 12.25ಕ್ಕೆ ಮುಂಬೈನಿಂದ ಹೊರಟು ಬೆಳಿಗ್ಗೆ 10.10ಕ್ಕೆ ಸೊಲ್ಲಾಪುರ ತಲುಪಲಿದೆ.
ಹೈದರಾಬಾದ್‌ನಿಂದ ಮುಂಬೈಗೆ: ಸಂಸದ ಡಾ.ಉಮೇಶ ಜಾಧವ್ ಅವರ ಕೋರಿಕೆ ಮೇರೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೈದರಾಬಾದ್‌ನಿಂದ ಮುಂಬೈಗೆ ಡಿ 3ರಿಂದ 8ರವರೆಗೆ ಹುಸೇನ್‌ಸಾಗರ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ತಾತ್ಕಾಲಿಕವಾಗಿ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು.
ಮಹಾಪರಿನಿರ್ವಾಣದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಾಧವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.