ADVERTISEMENT

ಕಲಬುರ್ಗಿ: ಸಾಮಾನು, ಸರಂಜಾಮಿಗೆ 2 ವಿಶೇಷ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:38 IST
Last Updated 7 ಏಪ್ರಿಲ್ 2020, 15:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ದೈನಂದಿನ ಅಗತ್ಯ ವಸ್ತುಗಳ ಕೊರತೆ ನೀಗಿಸಲು ಹಾಗೂ ದಿನಸಿ ಸರಬರಾಜು ಮಾಡುವ ಉದ್ದೇಶದಿಂದ ಮುಂಬೈ– ವಾಡಿ ಹಾಗೂ ಮುಂಬೈ– ಚೆನ್ನೈ ಮಧ್ಯೆ ಏ. 8ರಿಂದ 14ರವರೆಗೆ ಪ್ರತಿ ‘ಕೋವಿಡ್‌–19’ ವಿಶೇಷ ರೈಲುಗಳು ಸಂಚರಿಸಲಿವೆ.

ಏ. 8ರಂದು ಮಧ್ಯಾಹ್ನ 3.30ಕ್ಕೆ ಹೊರಡುವ ಒಂದು ರೈಲು ಏ. 8ರಂದು ರಾತ್ರಿ 12ಕ್ಕೆ ವಾಡಿ ನಿಲ್ದಾಣ ತಲುಪಲಿದೆ. ಅದೇ ರೀತಿ, ಏ. 9ರಂದು ರಾತ್ರಿ 2.30ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ ಮುಂಬೈ ತಲುಪಲಿದೆ.

ಇನ್ನೊಂದು ಮಾರ್ಗದಲ್ಲಿ ಏ. 8ರಂದು ಸಂಜೆ 7.35ಕ್ಕೆ ಮುಂಬೈನಿಂದ ಹೊರಡುವ ಈ ವಿಶೇಷ ರೈಲು ಏ. 9ರಂದು ಚೆನ್ನೈ ತಲುಪಲಿದೆ. ಏ. 9ರಂದು ಚೆನ್ನೈನಿಂದ ಮರಳಿ ಹೊರಟು ಏ. 10ರಂದು ಮುಂಬೈ ಸೇರಲಿದೆ.ಈ ರೀತಿಯ ಸಂಚಾರ ಏ. 14ವರೆಗೂ ಪ್ರತಿ ದಿನ ನಡೆಯಲಿದೆ.

ADVERTISEMENT

ಈ ರೈಲುಗಳು ಮಾರ್ಗಮಧ್ಯದಲ್ಲಿ ಬರುವಕಲ್ಯಾಣ, ಲೋನವಾಲಾ, ಪುಣೆ, ದೌಂಡ, ಕುರ್ದುವಾಡಿ, ಸೊಲ್ಲಾಪುರ, ಕಲಬುರ್ಗಿಯಲ್ಲಿ ನಿಂತು ವಾಡಿ ತಲುಪಲಿದೆ. ಇದೇ ಮಾರ್ಗದಲ್ಲಿ ಮರಳಲಿದೆ.

ಎಲ್ಲ ನಿಲ್ದಾಣಗಳಲ್ಲೂ ಈ ವಿಶೇಷ ರೈಲು ನಿಲುಗಡೆಯಾಗಲಿದೆ. ಈ ಹಿಂದೆಯೇ ಸಾಮಾನು, ಸರಂಜಾಮು, ಅಗತ್ಯ ವಸ್ತುಗಳು, ದಿನಸಿ, ವಾಹನ, ಗೃಹೋಪಯೋಗಿ ವಸ್ತುಗಳನ್ನು ಸಾಗಿಸಲು ಬುಕ್‌ ಮಾಡಿದ್ದರ ಪರಿಣಾಮ ಈ ರೈಲುಗಳನ್ನು ನಿಗದಿತ ಅವಧಿಯಲ್ಲಿ ಮಾತ್ರ ಓಡಿಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇದಲ್ಲದೇ, ಪ್ರತಿ ದಿನ ಸಂಚರಿಸುವ ಸರಕು ಸಾಗಣೆ ರೈಲುಗಳ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.