ಆಳಂದದ ರಾಮ ಮನೋಹರ ಲೋಹಿಯಾ ಪಿಯು ಕಾಲೇಜಿನಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳ ತಾಲ್ಲೂಕುಮಟ್ಟದ ಕ್ರೀಡಾಕೂಟವನ್ನು ಬಿ.ಆರ್.ಪಾಟೀಲ ಉದ್ಘಾಟಿಸಿದರು.
ಆಳಂದ: ‘ವಿದ್ಯಾರ್ಥಿಗಳು ಭೌದ್ದಿಕ ಜ್ಞಾನದ ಜತೆಗೆ ಕೌಶಲಗಳ ಅಭಿವೃದ್ಧಿಗೆ ಕ್ರೀಡೆಯು ಪೂರಕವಾಗಲಿದೆ’ ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್.ಪಾಟೀಲ ತಿಳಿಸಿದರು.
ತಾಲ್ಲೂಕಿನ ಕೊರಳ್ಳಿ ಕ್ರಾಸ್ ಸಮೀಪದ ವಿವೇಕ ವರ್ಧನಿ ಪಬ್ಲಿಕ್ ಶಾಲಾ ಮೈದಾನದಲ್ಲಿ ಬುಧವಾರ ರಾಮ ಮನೋಹರ ಲೋಹಿಯಾ ಪಿಯು ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡ ಪಿಯು ಕಾಲೇಜುಗಳ ತಾಲ್ಲೂಕುಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರಲ್ಲಿ ಮನರಂಜನೆಗಾಗಿ ಮೊಬೈಲ್ ಬಳಕೆ ಅಧಿಕವಾಗುತ್ತಿದೆ. ಶಾಲಾ ಕಾಲೇಜು ಹಂತದಲ್ಲಿ ಆಟ, ಕ್ರೀಡೆ, ವ್ಯಾಯಾಮ, ಸಂಗೀತ ಮತ್ತಿತರ ಕಲೆಗಳ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ದೈಹಿಕವಾಗಿ ಸದೃಡತೆ ಹೊಂದಿದರೆ ಮಾನಸಿಕವಾಗಿ ಬಲಿಷ್ಠರಾಗಲು ಸಾಧ್ಯವಿದೆ ಎಂದರು.
ಪ್ರಾಚಾರ್ಯ ನಾಗಣ್ಣಾ ಸಲಗರೆ ಮಾತನಾಡಿದರು. ಸಂಸ್ಥೆ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕೊರಳ್ಳಿ ಗ್ರಾ.ಪಂ. ಅಧ್ಯಕ್ಷೆ ಪ್ರಿಯಾಂಕಾ ಎಸ್. ವಾರದ, ಮಲ್ಲಿನಾಥ ಪಾಟೀಲ, ಶರಣಬಸಪ್ಪ ಇಟಗಿ, ಶಮಸೋದ್ದಿನ್ ಕಮಲಾಪುರೆ, ಶಿವಲಿಂಗಪ್ಪ ಮಂಟಗಿ ಮತ್ತಿತರರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ನಿಂಗಪ್ಪ ಕೌಲಗಿ, ಸತೀಶ ಕೊಗನೂರೆ, ವಿರೂಪಾಕ್ಷಪ್ಪ ಬಿರಾದಾರ, ಸಂಗೀತಾ ಮತ್ತಿತರರು ನಿರ್ಣಾಯಕರಾಗಿದ್ದರು.ಬುಧವಾರ ವಾಲಿಬಾಲ್, ಕಬ್ಬಡಿ, ಕೊಕ್ಕೊ, ಥ್ರೋಬಾಲ್, ಜಾವೆಲಿನ್ ಥ್ರೋ, ಶಾಟ್‌ಪಟ್, ಲಾಂಗ್‌ಜಂಪ್, ಹೈಜಂಪ್, ಓಟದ ಸ್ಪರ್ಧೆಗಳು ಜರುಗಿದವು.
ಆಳಂದ, ಮಾದನ ಹಿಪ್ಪರಗಿ, ಕಮಲಾನಗರ, ಯಳಸಂಗಿ, ನಿಂಬರ್ಗಾ, ಖಜೂರಿ, ಸರಸಂಬಾ, ಕಡಗಂಚಿ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.